ಸಮಸ್ಯೆ-ಸಮಾಧಾನ ಎಂಬುದು ಲೇಖಕ ಯಂಡಮೂರಿ ವೀರೇಂದ್ರನಾಥ ಅವರ ಪ್ರೇರಣಾತ್ಮಕ ಬರಹಗಳ ಕೃತಿ. ಆಧುನಿಕ ಬದುಕಿನ ಒತ್ತಡಗಳು ವಿವಿಧ ಆಯಾಮಗಳಲ್ಲಿ ತಮ್ಮ ಕರಾಳತೆಯ ಪ್ರಭಾವವನ್ನು ಬೀರುತ್ತಿವೆ. ಇದರಿಂದ ಮನುಷ್ಯನ ಬದುಕು ತತ್ತರಿಸುತ್ತಿದೆ. ಇಂತಹ ಒತ್ತಡಗಳಿಂದ ಹೇಗೆ ಮುಕ್ತನಾಗಬೇಕು ಎಂಬ ಸಮಸ್ಯೆ ವಿಶೇಷವಾಗಿ ಯುವಕರನ್ನು ಕಾಡುತ್ತಿದೆ. ಉದ್ಯೋಗ, ಓದು, ಪ್ರೇಮ ವ್ಯವಹಾರ, ಹಣ ಸಂಪಾದನೆ, ಬದುಕಿನ ಭದ್ರತೆ, ಕಚೇರಿಯ ಒತ್ತಡಗಳು, ಅನಗತ್ಯ ಭಯ ಇತ್ಯಾದಿ ಒತ್ತಡಗಳ ಭೀತಿಯ ನೆರಳು ಆವರಿಸಿಕೊಳ್ಳುತ್ತಿದೆ. ಇವುಗಳಿಗೆ ಪರಿಹಾರವಾಗಿಯೂ, ಬದುಕಿನ ಪ್ರೀತಿ ಹೆಚ್ಚಿಸಿಕೊಳ್ಳುವಂತೆಯೂ ಇಲ್ಲಿಯ ಬರಹಗಳಿವೆ.
©2024 Book Brahma Private Limited.