ರಾಜ ಒಡೆಯರ್ ಎಂ.ಎಸ್ ವೇದಾ ಅವರ ಕೃತಿಯಾಗಿದೆ. ಶ್ರೀರಂಗರಾಯರ ಕಾಲದಲ್ಲಿ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಾಲಯದಲ್ಲಿ ಮಂಗಳವಾರ ಮತ್ತು ಶುಕ್ರವಾರ ರಂಗನಾಯಕಿ ಅಮ್ಮನವರಿಗೆ ರತ್ನಾಭರಣಗಳಿಂದ ಅಲಂಕರಿಸಿ ಪೂಜಿಸುತ್ತಿದ್ದರು. ದೇವಾಲಯದ ಅಧಿಕಾರಿಗಳು ಮಹಾರಾಣಿ ಅಲಮೇಲಮ್ಮನವರ ಬಳಿ ಆಭರಣ ಪಡೆದು ಅವರಿಗೇ ಹಿಂತಿರುಗಿಸುತ್ತಿದ್ದರು. ಅಲಮೇಲಮ್ಮನವರು ಮಾಲಂಗಿಗೆ ಹೋದ ಬಳಿಕ ಅಮ್ಮನವರಿಗೆ ಅಲಂಕರಿಸುವ ಆಭರಣಗಳು ಕಾಣದಿದ್ದಾಗ ರಾಜ ಒಡೆಯರ ರಾಯಾಸದೊಂದಿದೆ ಬೊಕ್ಕಸದ ಅಧಿಕಾರಿಗಳು ಮಾಲಂಗಿಗೆ ತೆರಳುತ್ತಾರೆ. ಇದರಿಂದ ಬಹಳ ದುಃಖ ಪಟ್ಟ ಅಲಮೇಲಮ್ಮನವರು ಮೈಸೂರರಸರನ್ನು ಶಪಿಸುತ್ತಾ ಸತ್ತ ನಂತರವೂ ಕಾಡುತ್ತೇನೆಂದು ಹೇಳಿ ಕಾವೇರಿ ನದಿಯಲ್ಲಿ ಆಭರಣಗಳ ಸಮೇತ ಮುಳುಗುತ್ತಾರೆ. ಅಲಮೇಲಮ್ಮನವರು ಕೊಟ್ಟ ಶಾಪವೇನು? ಯುವರಾಜ ನರಸರಾಜರಿಗೆ ಏನಾಯಿತು? ನವರಾತ್ರಿ ಆಚರಣೆಯನ್ನು ದುಃಖದಲ್ಲಿದ್ದ ರಾಜ ಒಡೆಯರು ಹೇಗೆ ನಿಭಾಯಿಸಿದರು? ಕಾರುಗಳ್ಳಿ ದಳವಾಯಿ ವೀರರಾಜಯ್ಯ ಮಹಾಪ್ರಭುಗಳಾದ ರಾಜ ಒಡೆಯರಿಗೆ ಹೇಗೆ ಸಂಚು ಮಾಡಿ ವಿಷವುಣಿಸಿದರು ಮತ್ತು ಅದರಿಂದ ಒಡೆಯರು ಹೇಗೆ ಪಾರಾದರು? ಸಪ್ತಗಿರಿವಾಸ ವೆಂಕಟಾಚಲಪತಿಯ ಭಕ್ತನಾದ ಅಂಧ ನಾರಾಣಪ್ಪನಿಗೆ ರಾಜ ಒಡೆಯರು ಹೇಗೆ ದೃಷ್ಟಿ ಬರುವಂತೆ ಮಾಡಿದರು? ಮಹಾರಾಜರು ತಮ್ಮ ರಾಜಕುಮಾರಿಗೆ ಪೂರ್ವಿಕರಾದ ಯದುರಾಯರ ಕಥೆಯನ್ನು ಸುಂದರವಾಗಿ ವಿವರಿಸಿದ ಬಗೆ - ಇವುಗಳನ್ನೆಲ್ಲ ಪುಸ್ತಕ ಓದಿ ಸವಿಯಬೇಕು.
©2024 Book Brahma Private Limited.