ನೊಂದ ಮಹಿಳೆಯರು ಆತ್ಮವಿಶ್ವಾಸದೆಡೆಗೆ

Author : ಜಿ.ಎಸ್. ಜಯದೇವ

Pages 104

₹ 35.00




Year of Publication: 2014
Published by: ನವಕರ್ನಾಟಕ ಪ್ರಕಾಶನ
Address: # 11, ಎಂಬೆಸಿ ಸೆಂಟರ್, ಕ್ರೆಸೆಂಟ್ ರಸ್ತೆ, ಶಿವಾನಂದ ವೃತ್ತ, ಕುಮಾರಪಾರ್ಕ್ ಪೂರ್ವ, ಬೆಂಗಳೂರು

Synopsys

ಲೇಖಕ ಜಿ.ಎಸ್. ಜಯದೇವ ಅವರ ಕೃತಿ-ನೊಂದ ಮಹಿಳೆಯರು ಆತ್ಮವಿಶ್ವಾಸದೆಡೆಗೆ. ಡಾ. ಸಿ.ಆರ್. ಚಂದ್ರಶೇಖರ ಅವರು ವ್ಯಕ್ತಿತ್ವ ವಿಕಸನ ಮಾಲೆಯಡಿ ಸಂಪಾದಿಸಿದ್ದಾರೆ.ಜಾಗತೀಕರಣ ವ್ಯವಸ್ಥೇಯು ಪ್ರಮುಖವಾಗಿ ಮಹಿಳೆ ಹಾಗೂ ಮಕ್ಕಳನ್ನು ಮೂಲೆಗುಂಪು ಮಾಡುತ್ತಿದೆ. ಹೊಸ ಹೊಸ ರೂಪ ಪಡೆದು ಶೋಷಣೆಯ ರೀತಿಗಳು ವಿಭಿನ್ನವಾಗುತ್ತಿವೆ. ತಮ್ಮ ಬದುಕಿನ ಘನತೆ-ಗೌರವ ಕಾಯ್ದುಕೊಳ್ಳಲು ಸ್ವತಃ ಮಹಿಳೆಯು ಎಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ತನಗಾಗಬಹುದಾದ ಅನ್ಯಾಯಗಳನ್ನು, ದೌರ್ಜನ್ಯವನ್ನು ಮೊದಲೇ ಊಹಿಸಿ ಮಾನಸಿಕವಾಗಿ ಸನ್ನದ್ಧಳಾಗಬೇಕು. ಈ ದಿಕ್ಕಿನಲ್ಲಿ ಮಹಿಳೆಯರು ಸದೃಢವಾದ ವ್ಯಕ್ತಿತ್ವವನ್ನು ತಮಗೆ ತಾವೇ ರೂಪಿಸಿಕೊಳ್ಳಲು ಪ್ರಯತ್ನಿಸಬೇಕು. ಎಂಬ ಚಿಂತನೆಗಳ ಬರಹಗಳು ಈ ಕೃತಿಯ ವೈಶಿಷ್ಟ್ಯ. 

About the Author

ಜಿ.ಎಸ್. ಜಯದೇವ

ಚಾಮರಾಜನಗರದಲ್ಲಿ ನೆಲೆಸಿರುವ ಜಿ.ಎಸ್‌.ಜಯದೇವ ಅವರು 'ದೀನಬಂಧು' ಎಂಬ ಸಂಸ್ಥೆ ಪ್ರಾರಂಭಿಸಿದ್ದಾರೆ. 1992 ರಲ್ಲಿ ಆರಂಭವಾದ ಸಂಸ್ಥೆಯು ಸರ್ಕಾರಿ ಶಾಲೆಯ ಮಕ್ಕಳನ್ನು ದತ್ತು ಪಡೆದು, ಅವರಿಗೆ ವಸತಿ, ಊಟ, ಮತ್ತು ಬಟ್ಟೆಯನ್ನು ಪೂರೈಸುವ ಕಾರ್ಯ ಮಾಡುತ್ತಿದೆ. ಪ್ರಾಧ್ಯಾಪಕರಾಗಿದ್ದ ಅವರು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಮೈಸೂರಿನಲ್ಲಿರುವ ಮಹಿಳಾ ಪುನರ್ವಸತಿ ಕೇಂದ್ರವಾದ 'ಶಕ್ತಿಧಾಮ'ದಲ್ಲಿ ಮತ್ತು ಬಿಳಿಗಿರಿರಂಗನ ಬೆಟ್ಟದಲ್ಲಿರುವ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದಲ್ಲಿಯೂ ಸೇವೆ ಸಲ್ಲಿಸಿದ್ದಾರೆ. ಜಯದೇವ ಅವರು ರಾಷ್ಟ್ರಕವಿ ಡಾ. ಜಿ.ಎಸ್.ಶಿವರುದ್ರಪ್ಪ ಅವರ ಮಗ. ಪ್ರಜಾವಾಣಿಯಲ್ಲಿ ’ಹಳ್ಳಿ ಹಾದಿ’ ಎಂಬ ಅಂಕಣ ಬರೆಯುತ್ತಿದ್ದರು. ಅದು ಪುಸ್ತಕ ರೂಪದಲ್ಲಿ ಪ್ರಕಟವಾಗಿದೆ. ...

READ MORE

Related Books