`ಮೌರ್ಯನಂತರದ ಭಾರತದಲ್ಲಿ ಸಮಾಜ ಮತ್ತು ಸಂಸ್ಕೃತಿ’ ಕೃತಿಯನ್ನು ಟಿ. ವೆಂಕಟೇಶ ಮೂರ್ತಿ ಅವರು ರಚಿಸಿದ್ದಾರೆ. ಭಾರತ ಪ್ರಾಚೀನ ಇತಿಹಾಸದಲ್ಲಿ ಮೌರ್ಯದ ನಂತರ ಸುಮಾರು ಐನೂರು ವರ್ಷಗಳ ಕಾಲಾವಧಿಯು ವಿಶೇಷವಾಗಿದೆ. ಇದು ಮೌರ್ಯ ಆಳ್ವಿಕೆಯ ನಂತರದ ಅವಧಿ. ಒಂದೆಡೆಯಲ್ಲಿ ಇದು ಬೌದ್ಧಧರ್ಮ ಮತ್ತು ಜೈನಧರ್ಮಗಳ ಏಳಿಗೆಗೆ ಸಾಕ್ಷಿಯಾದರೆ, ಅದರ ಜತೆಗೆ ಸಮಾಜವನ್ನು ಕುರಿತ ಬ್ರಾಹ್ಮಣೀಯ ಪರಿಕಲ್ಪನೆ ಮತ್ತು ಪೌರಾಣಿಕ ಧರ್ಮ ಪ್ರಾರಂಭದ ವರ್ಷಗಳಲ್ಲಿ ಪಡೆದ ರೂಪಕ್ಕೂ ಸಾಕ್ಷಿಯಾಯಿತು. ಈ ಅವಧಿಯಲ್ಲೇ ಪ್ರಾಚೀನ ಸಂಸ್ಕೃತದ ಉದಯ ಮತ್ತು ತಮಿಳು-ಬ್ರಾಹ್ಮಿ ಲಿಪಿಯ ಬಳಕೆಯೂ ಕಾಣ ಬಂತು. ಅರ್ಥಶಾಸ್ತ್ರ, ಮನಸ್ಮೃತಿ, ರಾಮಾಯಣ, ಮಹಾಭಾರತ, ನಾಟ್ಯಶಾಸ್ತ್ರ, ಕಾಮಸೂತ್ರ, ಮುಂತಾದ ಸಂಸ್ಕೃತದ ಪ್ರಮುಖ ರಚನೆಗಳು ರೂಪುಗೊಂಡದ್ದು ಅಂತಿಮ ರೂಪ ಪಡೆದದ್ದು ಈ ಕಾಲಘಟ್ಟದಲ್ಲಿಯೇ. ಹಾಗೆಯೇ, ಸಾಂಚಿ ಸ್ತೂಪ ಮತ್ತು ಅಜಂತದ ಆರಂಭಿಕ ಗುಹಾ ವರ್ಣಚಿತ್ರಗಳು ಕೂಡ ಇಲ್ಲಿಯೇ ಕಾಣಬಹುದು. ಈ ಪುಸ್ತಕವು ಮೌರ್ಯ ಕಾಲಘಟ್ಟದ ಸಾಮಾಜಿಕ, ಧಾಮಿಕ ಮತ್ತು ಸಾಂಸ್ಕೃತಿಕ ಬೆಳವಣಿಗೆಗಳನ್ನು ಚರ್ಚಿಸುತ್ತದೆ.
©2024 Book Brahma Private Limited.