ರಾಬರ್ಟ್ ಸೆವೆಲ್ ಬರೆದ ’ಎ ಫರ್ಗೆಟನ್ ಎಂಪೈರ್ ’ಕೃತಿಯ ಕನ್ನಡಾನುವಾದವನ್ನು ಲೇಖಕ ಸದಾನಂದ ಕನವಳ್ಳಿಯವರು ’ಮರೆತುಹೋದ ಮಹಾಸಾಮ್ರಾಜ್ಯ ವಿಜಯನಗರ’ ಎಂಬ ಶೀರ್ಷಿಕೆಯಡಿ ತಂದಿದ್ದಾರೆ. ಮೊದಲ ಮುದ್ರಣ 1992 ರಲ್ಲಿ ಆಗಿದ್ದು, ಐದನೇ ಮುದ್ರಣ 2015ರಲ್ಲಿ ಅಂಕಿತ ಪುಸ್ತಕವು ಪ್ರಕಟಿಸಿದೆ.
ವಿಜಯನಗರ ಸಾಮ್ರಾಜ್ಯವನ್ನು ಕುರಿತ ಈ ಕೃತಿಯು ವಿಜಯನಗರ ಸಾಮ್ರಾಜ್ಯದ ವಿಸ್ತಾರ, ಘನತೆ, ವೈಭವಗಳ ಬಗ್ಗೆ ಓದುಗರಿಗೆ ಪರಿಚಯಿಸುತ್ತದೆ.
ಸಾಮ್ರಾಜ್ಯದ ಮೂಲ, ಪ್ರಥಮ ರಾಜರು, ಸಾಮ್ರಾಜ್ಯದ ಬೆಳವಣಿಗೆ, ಒಂದನೆಯ ದೇವರಾಯ, ಎರಡನೆಯ ದೇವರಾಯ, ಎರಡನೆಯ ದೇವರಾಯನ ಆಳ್ವಿಕೆಯಲ್ಲಿ ವಿಜಯನಗರ, ಪ್ರಥಮ ರಾಜವಂಶದ ಮುಕ್ತಾಯ, ಎರಡನೆಯ ರಾಜವಂಶದ ಪ್ರಥಮ ರಾಜರು, ಕೃಷ್ಣದೇವರಾಯನ ಆಳ್ವಿಕೆ, ರಾಯಚೂರ ದಾಳಿ ಮತ್ತು ಯುದ್ದ ಮತ್ತು ಕೃಷ್ಣನ ಆಳ್ವಿಕೆಯ ಕೊನೆ, ಕೃಷ್ಣದೇವನ ಕಟ್ಟಡಗಳು, ನಿರ್ಮಾಣಗಳು ಮತ್ತು ಶಾಸನಗಳು, ಅಚ್ಯುತರಾಯನ ಆಳ್ವಿಕೆ, ಅಂತ್ಯದ ಆದಿ, ವಿಜಯನಗರದ ವಿನಾಶ, ಮೂರನೆಯ ರಾಜವಂಶ, ಬ್ಯಾರಡಸ್ ನ ಕಥಾನಕ, ಪ್ಯಾಸ್ ಮತ್ತು ನೂನಿಜ್ ರ ದಿನಚರಿಗಳು, ಡೊಮಿಂಗೊಸ್ ಪ್ಯಾಸ್ ನ ಕಥನ, ಫರ್ನಾಒ ನೂನಿಜ್ ನ ದಿನಚರಿ ಇವುಗಳ ಬಗ್ಗೆ ಸಂಕ್ಷಿಪ್ತವಾದ ಮಾಹಿತಿ ಒಳನೋಟಗಳನ್ನು ಈ ಕೃತಿ ನೀಡುತ್ತದೆ.
©2024 Book Brahma Private Limited.