ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬ ಮಾತಿದೆ. ಮಕ್ಕಳನ್ನು ಸಣ್ಣವರಿದ್ದಾಗಿನಿಂದ ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ಅವರು ಮುಂದೆ ಎಂತಹ ವ್ಯಕ್ತಿತ್ವ ಉಳ್ಳವರಾಗುತ್ತಾರೆ ಎಂಬುದು ನಿರ್ಧಾರವಾಗುತ್ತದೆ. ಈ ನಿಟ್ಟಿನಲ್ಲಿ ಹೊರಬಂದ ಗಿರಿಮನೆ ಶ್ಯಾಮರಾವ್‍ರ ಕೃತಿಯೇ "ಮಕ್ಕಳನ್ನು ಬೆಳೆಸುವುದು ಹೇಗೆ". ಹಿರಿಯರು ಮಕ್ಕಳ ಕುರಿತು ಯಾವ ರೀತಿ ವರ್ತಿಸಬೇಕು, ಮಕ್ಕಳನ್ನು ಯವ ರೀತಿ ಬೆಳೆಸಿದರೆ ಸೂಕ್ತ, ಮಕ್ಕಳ ಕಷ್ಟ ನೋವುಗಳೇನು, ಅವರ ಮನಸ್ಸಿನ ಜಂಜಾಟಗಳಿಗೆ ಯಾವ ರೀತಿ ಜಾಣ್ಮೆಯಿಮದ ಸ್ಪಂದಿಸಬೇಕು ಎಂಬುದರ ಕುರಿತು ಕೃತಿ ಬೆಳಕು ಚೆಲ್ಲುತ್ತದೆ. ವ್ಯಕ್ತಿತ್ವ ವಿಕಸನಕ್ಕೆ ಸಂಭಂದಿಸಿರುವ ಈ ಕೃತಿ ಮಕ್ಕಳಿಗೆ ಅವರ ಬೆಳವಣಿಗೆಯ ಅವಧಿಯಲ್ಲಿ ಏನೆಲ್ಲಾ ವಿದ್ಯೆಗಳು ಕ್ರಮೇಣವಾಗಿ ಅಗತ್ಯ, ಅವುಗಳನ್ನು ಹೇಗೆ ಕಲಿಸಿದರೆ ಚೆಂದ ಎಂದು ತಿಳಿಸುತ್ತದೆ. ಕಂಪ್ಯೂಟರ್ ಜಗತ್ತಿನಲ್ಲಿ ಯಾಂತ್ರಿಕವಾಗಿ ಬದುಕುತ್ತಿರುವ ಬೆಳೆಯುತ್ತಿರುವ ಮಕ್ಕಳಿಗೆ ಅಗತ್ಯ ವಿದ್ಯೆಯ ಜೊತೆ ವಿನಯವನ್ನು ಧಾರೆಯರಯುವ ಅವಶ್ಯಕತೆಯಿದೆ. ಮಕ್ಕಳನ್ನು ಕೇವಲ ಉದ್ಯೊಗಕ್ಕಾಗಿ ತಯಾರಿಸದೆ ಅವರನ್ನು ಉತ್ತಮ ಪ್ರಜೆಯಾಗಿ ಮೌಲ್ಯಾಧಾರಿತ ವ್ಯಕ್ತಿಯಾಗಿ ಹೊರತರುವ ಕುರಿತು ಗಿರಿಮನೆಯವರು ಪ್ರಸ್ತುತ ಕೃತಿಯಲ್ಲಿ ಪೋಷಕರಿಗೆ ಕಿವಿಮಾತು ಹೇಳಿದ್ದಾರೆ. ಮಕ್ಕಳಲ್ಲಿನ ಪ್ರತಿಭೆಯನ್ನು ಗುರುತಿಸಿ ಅವರನ್ನು ಜೀವನದಲ್ಲಿ ಉದಯೋನ್ಮುಖರಾಗಿಸುವುದು ಹೇಗೆ, ದುರ್ಬುದ್ಧಿ, ದುಷ್ಚಟಗಳಿಗೆ ಮಕ್ಕಳು ಬಲಿಯದಾಗ ಅವರನ್ನು ಹೇಗೆ ಸರಿ ದಾರಿಗೆ ತರುವುದು ಎಂಬುದರ ಕುರಿತು ತಜ್ಞರ ಅಭಿಪ್ರಾಯಗಳನ್ನು ಸಮೀಕರಿಸಿ ಲೇಖಕರು ಆಧುನಿಕ ಸಮಜದ ಮಕ್ಕಳ ಬೆಳವಣಿಗೆಗೆ ಪೂರಕವಾದ ಕೃತಿಯನ್ನು ರಚಿಸಿದ್ದಾರೆ.
©2024 Book Brahma Private Limited.