ಎರಡು ಸಾವಿರ ವರ್ಷಗಳ ಕನ್ನಡ ನಾಡಿನ ಅಮೂಲ್ಯ ಪರಂಪರೆಯನ್ನು ಎರಡು ಸಂಪುಟಗಳಲ್ಲಿ ವಿವರಿಸಲಾಗಿದೆ. ಮೊದಲ ಸಂಪುಟ ಆದಿಕಾಲದಲ್ಲಿ ಕರ್ನಾಟಕದ ಭೂವಿಕಾಸ, ಆರ್ಥಿಕ ಭೂವಿಜ್ಞಾನ, ಪ್ರಾಕೃತಿಕ ಲಕ್ಷಣಗಳು, ವಾಯುಗುಣ, ಮಳೆ ಮತ್ತು ನೀರಾವರಿ, ಕರ್ನಾಟಕದ ಸಸ್ಯಸಂಪತ್ತು. ಕರ್ನಾಟಕದ ಪ್ರಾಣಿಸಂಪತ್ತು, ಕರ್ನಾಟಕದ ಬುಡಕಟ್ಟುಗಳು ಮತ್ತು ಜನಾಂಗಗಳು, ಭಾಷೆಗಳು, ಕರ್ನಾಟಕ ಪ್ರಾಕೃತಿಕ ಸಂಸ್ಕೃತಿಗಳು, ಐತಿಹ್ಯಗಳು ಮತ್ತು ಆಖ್ಯಾನಗಳು, ಚಾರಿತ್ರಿಕ ಯುಗ, ಶಾತವಾಹನರ ಕಾಲದ ಕರ್ನಾಟಕದ ಧರ್ಮ ಮತ್ತು ಸಮಾಜ, ರಾಜಕೀಯ ಚರಿತ್ರೆ, ಕದಂಬರು, ತಲಕಾಡಿನ ಗಂಗರು, ಬಾಣರು, ಪಲ್ಲವರು ಮತ್ತು ಕರ್ನಾಟಕ, ನೊಳಂಬ ಪಲ್ಲವರು, ಪುನ್ನಾಟ, ಮತ, ಸಮಾಜ ಮತ್ತು ಸಂಸ್ಕೃತಿ, ವೈಷ್ಣವ ಧರ್ಮ, ಜೈನ ಧರ್ಮ, ಕರ್ನಾಟಕದಲ್ಲಿ ಬೌದ್ಧ ಧರ್ಮ ಮತ್ತು ಅಲ್ಪಸಂಖ್ಯಾರ ಮತಗಳು, ಸಾಮಾಜಿಕ ಜೀವನ ಮತ್ತು ಆರ್ಥಿಕ ಸ್ಥಿತಿಗತಿ , ಕನ್ನಡ, ಸಂಸ್ಕೃತ, ವಾಸ್ತುಶಿಲ್ಪ ಮತ್ತು ಮೂರ್ತಿಶಿಲ್ಪ, ಬಾದಾಮಿ ಚಾಲುಕ್ಯರು... ಹೀಗೆ ಆದಿ ಕಾಲದ ಕರ್ನಾಟಕದ ಇತಿಹಾಸ ಹಾಗೂ ಸಂಸ್ಕೃತಿಯ ಕುರಿತು ಕೃತಿಯಲ್ಲಿ ಚರ್ಚಿಸಲಾಗಿದೆ.
©2024 Book Brahma Private Limited.