ಸಾಮಾಜಿಕ-ಸಾಂಸ್ಕೃತಿಕ ಅಧ್ಯಯನಗಳಿಗೆ ದೇವಾಲಯಗಳು ಪೂರಕ. ಕರ್ನಾಟಕ ದೇವಾಲಯಗಳ ಮಾಹಿತಿ ಒದಗಿಸುವ ಕನ್ನಡ ವಿಶ್ವವಿದ್ಯಾಲಯದ ಯೋಜನೆಯಡಿ ಈ ಕೃತಿಯನ್ನು ಪ್ರಕಟಿಸಲಾಗಿದೆ. ತುಂಗಾಭದ್ರ ಹಾಗೂ ಕೃಷ್ಣಾ ನದಿಗಳು ಹರಿಯುವ ಉತ್ತರ ಕರ್ನಾಟಕದ ಪ್ರಮುಖ ಜಿಲ್ಲೆ ರಾಯಚೂರು. ಆದ್ದರಿಂದ ಈ ಜಿಲ್ಲೆಯನ್ನು ’ದೋ-ಅಬ್’ ಎಂದೂ ಕರೆಯಲಾಗುತ್ತದೆ. ಈ ಜಿಲ್ಲೆಯು ಸತತ ಸಾಮಾಜಿಕ-ಸಾಂಸ್ಕೃತಿಕ-ರಾಜಕೀಯ ಹೋರಾಟಗಳನ್ನು ಕಂಡಿದೆ. ಸಮೃದ್ಧ ಸಂಖ್ಯೆಯಲ್ಲಿ ದೇವಾಲಯಗಳು ಇವೆ. ವಿಭಜಿತ ರಾಯಚೂರು ಜಿಲ್ಲೆಯ ಐದು ತಾಲೂಕು (ಮಾನ್ವಿ, ಲಿಂಗಸೂಗೂರು, ಸಿಂಧನೂರು, ರಾಯಚೂರು ಹಾಗೂ ದೇವದುರ್ಗ) ವ್ಯಾಪ್ತಿಯ ಎಲ್ಲ ದೇವಾಲಯಗಳ ಪುರಾಣ-ಐತಿಹಾಸಿಕ ಹಿನ್ನೆಲೆಯ ಪರಿಚಯವನ್ನು ಈ ಕೃತಿಯು ನೀಡುತ್ತದೆ.
©2024 Book Brahma Private Limited.