ಕನ್ನಡವೆಂದರೆ ಬರಿ ನುಡಿಯಲ್ಲ

Author : ಎಸ್. ವಿ. ಪ್ರಭಾವತಿ

Pages 278

₹ 135.00




Year of Publication: 2020
Published by: ತೇಜು ಪಬ್ಲಿಕೇಷನ್ಸ್‌
Address: ವಿ. ಪದ್ಮಾವತಿ #1014, 24ನೇ ಮುಖ್ಯ ರಸ್ತೆ, ಬಿ. ಎಸ್.‌ ಕೆ. 2ನೇ ಹಂತ, ಬೆಂಗಳೂರು- 560070
Phone: 9900195626

Synopsys

ಸ್ತ್ರೀವಾದಿ ಚಿಂತಕಿ ಡಾ. ಎಸ್‌ ವಿ ಪ್ರಭಾವತಿಯವರ ಚರಿತ್ರೆಗೆ ಸಂಬಂಧಿಸಿದ ಕೃತಿ ʼಕನ್ನಡವೆಂದರೆ ಬರಿ ನುಡಿಯಲ್ಲʼ. ಪುಸ್ತಕದ ಬಗ್ಗೆ ಲೇಖಕರೇ ಹೇಳುವಂತೆ, ಇದೊಂದು ಕನ್ನಡ ಸಾಹಿತ್ಯದ ಚರಿತ್ರೆಯಾಗಿದೆ. ನಾವು ಪಂಪನನ್ನುʼಕನ್ನಡದ ಆದಿಕವಿʼ ಎಂದು ನಂಬಿದ್ದೇವೆ. ಆದರೆ ಲೇಖಕರ ಅಭಿಪ್ರಾಯದ ಪ್ರಕಾರ ಇಲ್ಲಿ ಪಂಪನಿಗಿಂತ ಮೊದಲು ಕನ್ನಡ ಭಾಷೆಗಾಗಿ ಶ್ರಮಿಸಿದ ಎಷ್ಟೋ ಕವಿಗಳು, ಲೇಖಕರು ಇರಬಹುದು, ಉಲ್ಲೇಖವಿಲ್ಲದಿರುವ ಅಂತಹ ವ್ಯಕ್ತಿಗಳ ಬಗ್ಗೆ ವಿಷಾದ ವ್ಯಕ್ತ ಪಡಿಸುತ್ತಾರೆ. ಹಳಗನ್ನಡದಿಂದ ಇಂದಿನ ಸ್ಟ್ಯಾಂಡರ್ಡ್ ಕನ್ನಡದವರೆಗೂ ಬದಲಾವಣೆಗಳನ್ನು ಇಲ್ಲಿ ತೋರಿಸಿಕೊಟ್ಟಿದ್ದಾರೆ .ರಾಜಬದ್ಧ ಕವಿಗಳಿಂದ ದೇವಬದ್ಧ ಕವಿಗಳವರೆಗೆ, ಜಾನಪದ ಸಾಹಿತ್ಯದಿಂದ ನವೀನ ಸಾಹಿತ್ಯದವರೆಗೆ ಆಳವಾಗಿ ಅಭ್ಯಸಿಸಿ ಸಮರ್ಥವಾಗಿ ಬಿಂಬಿಸಿದ್ದಾರೆ. ಅಷ್ಟೇ ಅಲ್ಲದೆ ಆಯಾ ಕಾಲದ ಪ್ರಕಾರ ಸಮಾಜದ ಧೋರಣೆಯ ಬಗ್ಗೆ ಚಿತ್ರಸಿದ್ದಾರೆ. ಸ್ತ್ರೀ ಚಿಂತನೆ, ದಲಿತ ಮತ್ತು ಹಿಂದುಳಿದ ವರ್ಗದ ಬಗೆಗಿನ ವಿವರಣೆಯನ್ನು ಈ ಪುಸ್ತಕದಲ್ಲಿ ಕಾಣಬಹುದು.

About the Author

ಎಸ್. ವಿ. ಪ್ರಭಾವತಿ
(27 May 1950)

ಸ್ತ್ರೀವಾದಿ ಚಿಂತಕಿ ಎಂದೇ ಹೆಸರು ಗಳಿಸಿರುವ ಪ್ರಭಾವತಿಯವರು ಹುಟ್ಟಿದ್ದು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸಹೊಳಲು ಗ್ರಾಮದಲ್ಲಿ. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ‘ಕನ್ನಡ ಸಾಹಿತ್ಯದಲ್ಲಿ ದ್ರೌಪದಿ’ ಎಂಬ ಮಹಾಪ್ರಬಂಧ ಮಂಡಿಸಿ ಪಿಎಚ್.ಡಿ. ಪದವಿ ಪಡೆದರು. ಉದ್ಯೋಗಕ್ಕಾಗಿ ಸೇರಿದ್ದು ಭಾರತೀಯ ಸಂಸ್ಕೃತಿ ವಿದ್ಯಾಪೀಠ ಮಹಿಳಾ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆ ಪ್ರಾರಂಭಿಸಿದ ಅವರ ಮೊದಲ ಕವನ ಪ್ರಕಟವಾದುದು ಕನ್ನಡ ಪ್ರಭ ಪತ್ರಿಕೆಯಲ್ಲಿ. ನಂತರ ಕಥೆ, ಕವನ, ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಿತ. ನಾಲ್ಕು ಕಿರು ಕಾದಂಬರಿಗಳು ಮುಂಬಯಿಯ ‘ಕರ್ನಾಟಕ ಮಲ್ಲ’ ಪತ್ರಿಕೆಯಲ್ಲಿ ಪ್ರಕಟ. ಕನ್ನಡಿಗರ ಕನ್ನಡಿ, ...

READ MORE

Related Books