ಮಧ್ಯಯುಗೀನ ದಕ್ಷಿಣ ಭಾರತದ ಚರಿತ್ರೆಯಲ್ಲಿ ವಿಜಾಪುರದ ಆದಿಲಶಾಹಿಗಳ ಪಾತ್ರ ಪ್ರಮುಖ. ಆದಿಲ್‌ಶಾಹಿಗಳ ಮೂಲ ಆಕರಗಳು ಕನ್ನಡದಲ್ಲಿ ಸಾಕಷ್ಟು ದೊರಕದೇ ಇರುವುದು ಮತ್ತು ಪರ್ಶಿಯನ್, ದಖನಿ ಭಾಷೆಗಳಲ್ಲಿವೆ. ಅವುಗಳನ್ನು ಕನ್ನಡಕ್ಕೆ ಅನುವಾದಿಸುವ ಪ್ರಮುಖ ಕೆಲಸವನ್ನು ಡಾ. ಎಂ.ಎಂ. ಕಲಬುರ್ಗಿ ಅವರ ನೇತೃತ್ವವದಲ್ಲಿ ಡಾ. ಫ.ಗು. ಹಳಕಟ್ಟಿ ಸಂಶೋಧನಾ ಕೇಂದ್ರವು ಕೈಗೆತ್ತಿಕೊಂಡಿತ್ತು. ಕೃಷ್ಣ ಕೋಲ್ಹಾರ ಕುಲಕರ್ಣಿ ಅವರ ಸಂಪಾದಕತ್ವದಲ್ಲಿ ಆದಿಲ ಶಾಹಿ ಸಾಹಿತ್ಯ ಸಂಪುಟಗಳನ್ನು ಪ್ರಕಟಿಸಲಾಗಿದೆ. ಈ ಸರಣಿಯ 18ನೇ ಸಂಪುಟ ಕನ್ನಡದಲ್ಲಿ ಬಳಕೆಯಲ್ಲಿರುವ ಅರೇಬಿಕ್, ಪರ್ಶಿಯನ್ ಶಬ್ದಗಳು. ಈ ಸಂಪುಟವನ್ನು ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಸಂಪಾದಿಸಿದ್ದಾರೆ.
©2024 Book Brahma Private Limited.