ಶತಮಾನಗಳಿಂದ ಭೂಮಾಲಕರ ಶೋಷಣೆಗೆ ಒಳಗಾಗಿದ್ದ ರೈತಾಪಿ ವರ್ಗವು, ಶೋಷಣೆಯ ವಿರುದ್ಧ ಪ್ರತಿಭಟಿಸುವ ಮೂಲಕ ಕಾಗೋಡು ಚಳುವಳಿಗೆ ನಾಂದಿಹಾಡಿದರು. ಕಾಗೋಡು ಚಳುವಳಿಯು ಇವತ್ತಿಗೂ ಕೂಡ ಇತಿಹಾಸದ ಪುಟಗಳಲ್ಲಿ ಮಹತ್ವದ ಸ್ಥಾನ ಪಡೆದಿದೆ. ಭೂಮಾಲಿಕರು ರೈತರನ್ನು ಆರ್ಥಿಕವಾಗಿ , ಸಾಮಾಜಿಕವವಾಗಿ ,ಯಾವುದೇ ಮೂಲಭೂತ ಸವಲತ್ತುಗಳನ್ನು ಕೊಡದೆ , ಯಾವುದೇ ಸೌಲಭ್ಯಗಳನ್ನು ಒದಗಿಸಿದೆ ನಿರಂತರವಾಗಿ ಶೋಷಣೆ , ದಬ್ಬಾಳಿಕೆ ನಡೆಸುತ್ತಿದ್ದರು. ಎಲ್ಲಾ ರೀತಿಯಲ್ಲೂ ರೈತರನ್ನು ಕಡೆಗಣಿಸಿ ಶೋಷಣೆಗೆ ಒಳಪಡಿಸುತ್ತಿದ್ದರು. ರೈತರು ತಮ್ಮೆಲ್ಲ ಆಕ್ರೋಶವನ್ನು ಹೋರಾಟದ ಮೂಲಕ ಹೊರಹಾಕಿದರು. ಈ ಚಳುವಳಿಯಲ್ಲಿ ಭಾಗವಹಿಸಿ ಜೈಲುವಾಸ ಅನುಭವಿಸಿದ ಸಿ.ಬಿ.ಚಂದ್ರಶೇಖರ್ ರವರು ತಾವು ಅನುಭವಿಸಿದ ಅನುಭವನ್ನು ಈ ಕೃತಿಯಲ್ಲಿ ವಿವರಿಸಿದ್ದಾರೆ.
©2024 Book Brahma Private Limited.