ಕಾಗೋಡು (ಭೂ ಹೋರಾಟದ ಹಿನ್ನೋಟ)

Author : ಜಿ.ಪಿ. ಬಸವರಾಜು

Pages 112

₹ 95.00




Year of Publication: 2018
Published by: ಕನ್ನಡ ಪುಸ್ತಕ ಪ್ರಾಧಿಕಾರ
Address: ಕನ್ನಡ ಭವನ, ಜೆ.ಸಿ.ರಸ್ತೆ, ಬೆಂಗಳೂರು-560056
Phone: 080-22107758

Synopsys

ಚಳವಳಿಯ ಬಗ್ಗೆ ಮತ್ತೆ ಮತ್ತೆ ಭರವಸೆ, ಸ್ಫೂರ್ತಿ ಹೆಚ್ಚಿಸುವಂತಹುದು ಕಾಗೋಡು ಹೋರಾಟ. ಮಲೆನಾಡಿನ ಜನತೆ ಧೈರ್ಯ, ಸ್ಥೈರ್ಯದಿಂದ ಎದುರಿಸಿದ ಹಿಂಸಾರಹಿತವಾದ ಹೋರಾಟ ಕಾಗೋಡು ಚಳುವಳಿ. ಒಬ್ಬ ಭೂ ಮಾಲೀಕನಿಗೆ ಸೇರಿದ್ದ ಸಾವಿರಾರು ಎಕರೆ ಜಮೀನನ್ನು ನೂರಾರು ಗೇಣಿದಾರರಿಗೆ ಹಂಚಲ್ಪಟ್ಟಿದ್ದು ಈ ಚಳುವಳಿಯ ಐತಿಹಾಸಿಕ ಜಯ. ಬಹು ಮುಖ್ಯ ಹೋರಾಟದ ಬಗ್ಗೆ ಸಂಪೂರ್ಣ ವಿವರಗಳನ್ನು ಹಿರಿಯ ಪತ್ರಕರ್ತರು ಮತ್ತು ಕವಿಗಳಾಗಿರುವ ಜಿ.ಪಿ. ಬಸವರಾಜ ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಜಿ.ಪಿ. ಬಸವರಾಜು
(03 August 1952)

ಹಿರಿಯ ಪತ್ರಕರ್ತ, ಸಾಹಿತಿ ಜಿ.ಪಿ ಬಸವರಾಜು ಅವರು ಹುಟ್ಟಿದ್ದು 1952 ಆಗಸ್ಟ್ 3ರಂದು. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲರಾಗಿರುವ ಜಿ.ಪಿ. ಬಸವರಾಜು ಅವರು ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ. ಅವರಿಗೆ ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ. ...

READ MORE

Reviews

ಐತಿಹಾಸಿಕ ಚಳುವಳಿಯೊಂದರ ಸಜೀವ ಚಿತ್ರಣ

ಕರ್ನಾಟಕದ ಭೂ ಹೋರಾಟಗಳ ಪ್ರಸ್ತಾಪ ಬಂದಾಗಲೆಲ್ಲ ಕಾಗೋಡು ಸತ್ಯಾಗ್ರದ ಹೆಸರು ಕಾಗೋಡು ಉಲ್ಲೇಖವಾಗುತ್ತದೆ. ೧೯೫೦ರ ದಶಕದ ಆರಂಭದಲ್ಲಿ ಸಾಗರ ತಾಲ್ಲೂಕಿನಲ್ಲಿ ನಡೆದ ಈ ಹೋರಾಟದ ಕುರಿತು ಕನ್ನಡ ಪುಸ್ತಕ ಪ್ರಾಧಿಕಾಶರಕ್ಕಾಗಿ ರಚಿಸಲಾಗಿರುವ ಪರಿಚಯಾತ್ಮಕ ಎನ್ನಬಹುದಾದ ಕೃತಿಯಿದು.

ಸಾವಿರಾರು ಎಕರೆ ಭೂಮಿಯ ಮಾಲಿಕತ್ವ ಹೊಂದಿದ್ದ ಭೂ ಮಾಲೀಕರು ಭೂಮಿಯನ್ನು ಗೇಣಿಗೆ ಕೊಡುವ  ಪದ್ದತಿ ಆಗ ಜಾರಿಯಲ್ಲಿತ್ತು.ಅಂದಿನ ಸಾಮಾಜಿಕ ಸನ್ನಿವೇಶಕ್ಕೆ ತಕ್ಕಂತೆ ಭೂ ಮಾಲೀಕರು ಮೇಲ್ವರ್ಗದವರಾಗಿದ್ದರೆ ಗೇಣಿದಾರರು ಹಿಂದುಳಿದ ಸಮುದಾಯದವರಾಗಿದ್ದರು. ಹೀಗಾಗಿ ಗೇಣಿದಾರರ ಶೋಷಣೆ ಸಹಜ ಎನ್ನುವಂತೆ ನಡೆದಿತ್ತು.

ಗೇಣಿಯನ್ನು ಕೊಳಗದಲ್ಲಿ ನೀಡಲಾಗುತ್ತಿದ್ದು ಕೊಳಗದ ? ಅಳತೆಯ ರಿ ವಿಚಾರದಲ್ಲಿ ಆರಂಭವಾದ ತಗಾದೆ ಮುಂದೆ ಚಳವಳಿಯ ಸ್ವರೂಪ ಪಡೆದು,ರಾಜ್ಯ,ರಾಷ್ಟ್ರದ ಗಮನ ಸೆಳೆಯಿತು.ಗೋಪಾಲಗೌಡರ ನೇತೃತ್ವದಲ್ಲಿ ಸಮಾಜವಾದಿಗಳ ಪ್ರವೇಶದೊಂದಿಗೆ ಚಳವಳಿಗೆ ಸೈದ್ದಾಂತಿಕ ಸ್ಪರ್ಶ ದೊರಕಿ ಲೋಹಿಯಾ, ಜಯಪ್ರಕಾಶ್ ನಾರಾಯಣ್ ಅವರೆಲ್ಲಾ ಸಾಗರಕ್ಕೆ ಆಗಮಿಸಿ ಸತ್ಯಾಗ್ರಹಿಗಳಿಗೆ ಬೆಂಬಲ ಘೋಷಿಸಿದ್ದು ಇತಿಹಾಸ.

ಮುಂದೆ ಕಾಗೋಡು ಚಳವಳಿ ಕಾರಣಕ್ಕೆ ಭೂ ಸುಧಾರಣೆ ಕಾನೂನು * ಜಾರಿಯಾಯಿತು ಎನ್ನಲಾಗುತ್ತಿದೆ.ಇದರಿಂದ ಗೇಣಿದಾರರು ಅಪಾರ ಪ್ರಮಾಣದಲ್ಲಿ ಭೂಮಿಯ ಹಕ್ಕನ್ನು ಪಡೆದರು ಎನ್ನುವ ವಾಸ್ತವ ಕಣ್ಣೆದೆರು ಇದೆ. ಈ ಎಲ್ಲಾ ಸಂಗತಿಗಳನ್ನು ಲೇಖಕರು ಸರಳವಾದ ಭಾಷೆಯಲ್ಲಿ ಚಿತ್ರವತ್ತಾದ್ರ ನಿರೂಪಣೆಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ. ಆರು ದಶಕಗಳಿಗೂ ಹಿಂದೆ ನಡೆದ ಚಳವಳಿಯ ಬಗ್ಗೆ ವಿಸ್ಕೃತಿ ಆವರಿಸಿರುವ ಈ ಹೊತ್ತಿನಲ್ಲಿ ಅದರ ಬಗ್ಗೆ ಕೃತಿ ರಚಿಸುವಾಗ ಈಗಾಗಲೇ ಇದೇ ವಿಷಯದ ಕುರಿತು ಬಂದಿರುವ ಕೃತಿಗಳು ಹೇಳಿರದ, ಗುರುತಿಸಿರದ ಅಂಶಗಳು ಇರಬೇಕಾಗುತ್ತದೆ. ಆರು ದಶಕಗಳಿಗೂ ಹಿಂದೆ ನಡೆದ ಚಳವಳಿಯ ಬಗ್ಗೆ ವಿಸ್ಕೃತಿ ಆವರಿಸಿರುವ ಈ ಹೊತ್ತಿನಲ್ಲಿ ಅದರ ಬಗ್ಗೆ ಕೃತಿ ರಚಿಸುವಾಗ ಈಗಾಗಲೇ ಇದೇ ವಿಷಯದ ಕುರಿತು ಬಂದಿರುವ ಕೃತಿಗಳು ಹೇಳಿರದ, ಗುರುತಿಸಿರದ ಅಂಶಗಳು ಇರಬೇಕಾಗುತ್ತದೆ. 'ಕಾಗೋಡು' ಕೃತಿಯಲ್ಲಿ ವಿವರಗಳು ಲೇಖಕರ ಚಿತ್ರಕ ಶಕ್ತಿಯಿಂದ (ಕಣ್ಣೆದುರೆ ನಡೆದಿರುವ ಘಟನೆಗಳಂತೆ) ಪರಿಣಾಮಕಾರಿಯಾಗಿ ನಿರೂಪಣೆಗೊಳ್ಳುವಲ್ಲಿ ಪ್ರಕಟಗೊಂಡಿರುವ ಆಸಕ್ತಿ, ಉತ್ಸಾಹ ಚಳವಳಿಯನ್ನು ವಿಮರ್ಶಿಸುವ, ವಿಶ್ಲೇಷಿಸುವ ನಿಟ್ಟಿನಲ್ಲಿ ವ್ಯಕ್ತವಾಗಿಲ್ಲ. ಈ ದಿಕ್ಕಿನಲ್ಲಿ ಲೇಖಕರ ಮಹತ್ವಾಕಾಂಕ್ಷೆಯ ಕೊರತೆ ಕೃತಿಗೆ ಸೀಮಿತ ಚೌಕಟ್ಟು ನಿರ್ಮಿಸಿದಂತಾಗಿದೆ.

ಕಾಗೋಡು ಸತ್ಯಾಗ್ರಹದ ಕುರಿತು ಬಂದಿರುವ ಪ್ರಮುಖ ವಿಮರ್ಶೆ ಎಂದರೆ ನಿಜಕ್ಕೂ ಇದೊಂದು ಚಳವಳಿಯೆ ಅಥವಾ ಬಂಡಾಯವೇ ಎನ್ನುವುದು. ಸಾಗರ ತಾಲ್ಲೂಕಿನಲ್ಲಿ ನಡೆದ ಈ ಚಳವಳಿಯ ಪ್ರಭಾವ ಪಕ್ಕದ ಸೊರಬ ಹಾಗೂ ಹೊಸನಗರ ತಾಲ್ಲೂಕಿಗೂ ಯಾಕೆ ತಟ್ಟಲಿಲ್ಲ ಎಂಬ ಪ್ರಶ್ನೆ ಅಧ್ಯಯನಕಾರರನ್ನು ಕಾಡಿದೆ. ಇಂತಹ ಪ್ರಶ್ನೆಗಳಿಗೆ ಲೇಖಕರು ಮುಖಾಮುಖಿಯಾಗಿದ್ದರೆ ಏನಾದರೂ ಹೊಸ ಹೊಳಹು ದೊರಕುತ್ತಿತ್ತೇನೋ. - ಭೂ ಸುಧಾರಣೆ ಕಾನೂನು ಜಾರಿಯಾಗಬೇಕು ಎಂಬ ಪ್ರಸ್ತಾಪ ಮೊದಲ ಪಂಚವಾರ್ಷಿಕ ಯೋಜನೆಯಲ್ಲಿ ಇತ್ತು. ನಿಜಕ್ಕೂ ಕಾಗೋಡು ಸತ್ಯಾಗ್ರಹದಿಂದಾಗಿ ಕರ್ನಾಟಕದಲ್ಲಿ ಈ ಕಾನೂನು ಜಾರಿಯಾಯಿತು ಎಂಬುದನ್ನು ಒಪ್ಪಿಕೊಳ್ಳುವುದಾದರೂ ಅದಕ್ಕಾಗಿ ಎರಡೂವರೆ ದಶಕ ಯಾಕೆ ಕಾಯಬೇಕಾಯಿತು ಎನ್ನುವ ಪ್ರಶ್ನೆ ಕೂಡ ಇಂದಿಗೂ ಜೀವಂತವಾಗಿದೆ. ಇಂತಹ ಪ್ರಶ್ನೆಗೆ ಉತ್ತರವನ್ನು ಹುಡುಕುವ ಪ್ರಯತ್ನ ಕೃತಿಯಲ್ಲಿ ಆಗಬೇಕಿತ್ತು.

ಕಾಗೋಡು ಸತ್ಯಾಗ್ರಹ, ಭೂ ಸುಧಾರಣೆ ಕಾನೂನಿನ ನಂತರವೂ ಈ ಭಾಗದ ದಲಿತರಿಗೆ ದಕ್ಕದ ಭೂಮಿಯ ಹಕ್ಕು, ಆ ಕಾಲದಲ್ಲಿ ಜಾತಿಯ ಹೆಸರಿನಲಿ ವಿಭಜನೆಗೊಂಡ ಸಮಾಜದ ಯಥಾಸ್ಥಿತಿಯ ಮುಂದುವರಿಕೆ, ಇವುಗಳನ್ನು ಕತಿ ಒಳಗೊಳ್ಳಬಹುದಿತ್ತು. ಇವುಗಳು ಏನೇ ಇದ್ದರೂ ಮನುಷ್ಯನ ಘನತೆಯ ಪ್ರಶ್ನೆಯನು. ಮುಂದಿಟ್ಟುಕೊಂಡು ರೈತರ ಸ್ವಾಭಿಮಾನದ ಸಂಕೇತವಾಗಿ ನಡೆದ ಹೋರಾಟವೊಂದರ ಕುರಿತು ಈ ಹೊತ್ತಿನಲ್ಲಿ ಬಂದಿರುವ ಕೃತಿ ಮರೆಗೆ ಸರಿಯುತ್ತಿರುವ ಚಳವಳಿಗಳ ಬಗ್ಗೆ ಯುವ ತಲೆಮಾರಿನಲ್ಲಿ ಒಂದಿಷ್ಟು ಆಸಕ್ತಿ, ಸ್ಫೂರ್ತಿ ತಂದರೆ ಕೃತಿಕಾರರ ಶ್ರಮಕ್ಕೆ ಬೆಲೆ ಬಂದೀತು.

  • ಎಂ. ರಾಘವೇಂದ್ರ

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದಿ ಮಾಸ ಪತ್ರಿಕೆ (ನವೆಂಬರ್‍ 2018)

 

 

 

Related Books