18ನೇ ಶತಮಾನದಲ್ಲಿ ಮೈಸೂರು ರಾಜರ ಆಳ್ವಿಕೆಯು ಕೈತಪ್ಪಿ ಒಬ್ಬ ಸಾಮಾನ್ಯ ನಿರಕ್ಷಕರ ಕುಕ್ಕಿಯಾದ ಹೈದರ್ ಅಲಿಯ ಕೈ ಸೇರಿತು. ನಂತರ, ಹೈದರ್ ಅಲಿಯು ರಾಜವಂಶದವನೆಂದೇ ಹೊಗಳುವ ತಂಡವೇ ಹುಟ್ಟಿಕೊಂಡಿತು. ನೆಪೋಲಿಯನ್ ಬೋನಾಪಾರ್ಟನನ್ನೂ ಸಹ ದೊರೆಯಾದ ಮೇಲೆ ರಾಜವಂಶನೆಂದೇ ಇತಿಹಾಸ ಬರೆಯಲಾಯಿತು ಎಂದು ವಿಶ್ಲೇಷಿಸುವ ಈ ಐತಿಹಾಸಿಕ ಬರವಣಿಗೆಯು ಹೈದರ್ ಅಲಿಯ ಆಡಳಿತ, ಜೀವನ ವೃತ್ತಾಂತವನ್ನು ಮೊದಲ ಭಾಗ ಕಟ್ಟಿಕೊಟ್ಟರೆ ತದನಂತರದ ಭಾಗವು ಆತನ ಮಗ ಟಿಪ್ಪು ಸುಲ್ತಾನನ ಆಳ್ವಿಕೆ, ಬ್ರಿಟಿಷರೊಂದಿಗಿನ ಆತನ ಹೋರಾಟ, ಆಡಳಿತದಲ್ಲಿಯ ಸುಧಾರಣೆ ಇತ್ಯಾದಿಗಳನ್ನು ದಾಖಲಿಸಿದ ಕೃತಿ ಇದು.
ಟಿಪ್ಪುವಿನ ಸ್ವಭಾವವನ್ನು ಅರಿತಿದ್ದ ತಂದೆ ಹೈದರ್ ಅಲಿ, ಆಡಳಿತದ ವಿಷಯಕ್ಕೆ ಬಂದಾಗ ‘ನೀನು ನಿನ್ನ ಅವಿವೇಕತನದಿಂದ ರಾಜ್ಯವನ್ನು ಕಳೆದುಕೊಳ್ಳುವೆ’ ಎಂದು ಪದೇ ಪದೆ ಎಚ್ಚರಿಸುತ್ತಿದ್ದನು. ಕೊನೆಗೂ ಹಾಗೇ ಆಯಿತು ಎಂದು ಲೇಖಕರು ಅಭಿಪ್ರಾಯಪಟ್ಟಿದ್ದಾರೆ.
©2024 Book Brahma Private Limited.