ಒಬ್ಬ ವ್ಯಕ್ತಿಯ ಹರೆಯದ ತಲ್ಲಣಗಳು, ರೋಮಾಂಚನಗಳು ಅನೇಕ ಸಂದರ್ಭದಲ್ಲಿ ವ್ಯಕ್ತಿಯ ಬದುಕನ್ನು ರೂಪಿಸುವಲ್ಲಿ ಮಹತ್ವದ ಪಾತ್ರವನ್ನು ವಹಿಸುತ್ತವೆ. ಈ ಸಂದರ್ಭದಲ್ಲಿ ಎದುರಾಗುವ ಗಾಯಗಳು ಕೆಲವೊಮ್ಮೆ ಶಾಶ್ವತವಾಗಿ ಉಳಿದು, ಅವನ ಮುಂದಿನ ಬದುಕನ್ನೆಲ್ಲ ನುಚ್ಚು ನೂರು ಮಾಡುವ ಶಕ್ತಿಯನ್ನು ಹೊಂದಿದೆ. ಯೋಗೇಶ್ ಮಾಸ್ಟರ್ ಈಗಾಗಲೇ ಹಲವು ವಿಷಯಗಳ ಕುರಿತು ಬರೆದಿದ್ದಾರೆ. ಈ ಕೃತಿಯಲ್ಲೂ ಅವರು ಯುವಕರ ಮನಸ್ಸನ್ನು ಮನಶ್ಯಾಸ್ತ್ರೀಯ ನೆಲೆಯಲ್ಲಿ ನೋಡಿ, ಅವರ ಭಾವನೆಗಳು ತಲ್ಲಣಗಳು, ಪ್ರೇರಣೆಗಳನ್ನು ಅರ್ಥಮಾಡಿಸಲು ಪ್ರಯತ್ನಿಸಿದ್ದಾರೆ. ಪ್ರೇಮ ಕಾಮಗಳ ನಡುವೆ ಸಿಲುಕಿಕೊಳ್ಳುವ ಯುವ ಮನಸ್ಸು, ಚಟಗಳ ಚಕ್ರವ್ಯೂಹದಲ್ಲಿ ಸಿಲುಕಿ ಹೊರ ಬರಲಾರದೆ ನರಳುವ ಮನಸುಗಳನ್ನು ಅವರು ಅರ್ಥ ಮಾಡಿಸಲು ಯತ್ನಿಸುತ್ತಾರೆ. ಈ ಸಂದರ್ಭದಲ್ಲಿ ಹಿರಿಯರ ಮತ್ತು ಸಮಾಜದ ನಿಜವಾದ ಹೊಣೆಗಾರಿಕೆಗಳೇನು ಎನ್ನುವುದು ಸೂಕ್ಷ್ಮವಾಗಿ ತಿಳಿಸುವ ಪ್ರಯತ್ನವನ್ನು ಕೃತಿಯಲ್ಲಿ ಮಾಡುತ್ತಾರೆ. ಈ ಕೃತಿ ವ್ಯಕ್ತಿತ್ವವನ್ನು ಕಟ್ಟುವ ರೂಪಿಸುವ ಕೆಲಸವನ್ನು ಮಾಡುತ್ತದೆ. ಯುವಕರಲ್ಲಿ ಜವಾಬ್ದಾರಿಗಳನ್ನು ನಿರೀಕ್ಷಿಸುವ ಪಾಲಕರು ಈ ಸಂದರ್ಭದಲ್ಲಿ ಹೊತ್ತುಕೊಳ್ಳಬೇಕಾದ ಜವಾಬ್ದಾರಿಗಳನ್ನೂ ನೆನಪಿಸುತ್ತದೆ.
©2024 Book Brahma Private Limited.