ಕನ್ನಡ ನೆಲದಲ್ಲಿ ರಾಜ್ಯಭಾರ ಮಾಡಿದ ಸಂಸ್ಥಾನಿಕರಲ್ಲಿ ಹಂಡೆ ಅರಸರ ಕುರಿತು ವಿದ್ವಾಂಸರು ಗಮನ ಕೊಡದಿರುವ ಕಾಲದಲ್ಲಿ ಪ್ರೊ.ಎಸ್.ಸಿ.ಪಾಟೀಲರು ವಿಜಯನಗರೋತ್ತರ ಕಾಲಕ್ಕೆ ನಿಂತುಹೊಗಿದ್ದ ಅವರ ಚರಿತ್ರೆಯನ್ನು ಶಾಸನಗಳ ಆಧಾರ ಒದಗಿಸಿ ಕಲ್ಯಾಣ ಚಾಲುಕ್ಯರಿಗೂ ಪೂರ್ವಕ್ಕೆ ಒಯ್ದಿರುವುದು ಮತ್ತು ಇವರು ಕಲ್ಯಾಣ ಚಾಲುಕ್ಯರ ವಂಶಸ್ಥರು ಎಂದು,ಇವರ ಧಾರ್ಮಿಕ ಪ್ರೀತಿ, ಜನಹೀತ ಕಾರ್ಯಗಳು ,ವೀರನಡುವಳಿಕೆಗಳು ಗಂಭೀರ ಅಧ್ಯಯನದ ವಸ್ತು ಎಂಬಲ್ಲಿ ಎರಡು ಮಾತಿಲ್ಲ.ಜಗದ್ಗುರು ಕೊಟ್ಟರು, ನಿಡುಮಾಮಿಡಿ, ತೋಂಟದಾರ್ಯ ಗದಗ ಮಠಗಳ ಜಗದ್ಗುರುಗಳು ಈ ಹಂಡೆ ಅರಸು ಮನೆತನಕ್ಕೆ ರಾಜಗುರುಗಳಾಗಿದ್ದರು.ಹಂಡೆ ಅರಸರು ಶೈವರಾಗಿ ನಂತರ ವೀರಶೈವರಾಗಿ 12 ನೆಯ ಶತಮಾನದಲ್ಲಿ ಲಿಂಗಾಯತರಾಗಿ ಈವರು ಸರ್ವಧರ್ಮ ಸಮಾನತೆಯನ್ನು ತಮ್ಮ ಆಡಳಿತದುದ್ದಕ್ಕೂ ನೆರವೇರಿಸಿಕೊಂಡು ಬಂದಿದ್ದಾರೆ.. ವಿಜಯನಗರದ ಅಳಿಯ ರಾಮರಾಯನ ನೀರ್ದೇಶನದಂತೆ. ಕ್ರಿ.ಶ.1543 ರಲ್ಲಿ ವಿಜಯನಗರ ಸಾಮ್ರಾಜ್ಯಕ್ಕೆ ರಕ್ಷಣಾ ಕೊಟೆಯಾಗಿ ನಿಂತು ಅಂದು ಅಹ್ಮದನಗರದ ನಿಜಾಮ್ ಶಾಹಿ ಅರಸನನ್ನು ಬಗ್ಗು ಬಡಿದ ಈ ಹಂಡೆ ಸಂಸ್ಥಾನಿಕರ ಮೂಲಪುರುಷ ,ಪ್ರಸಿದ್ದ ದೊರೆ ಬಾಲದ ಹನುಮಪ್ಪನಾಯಕ ಅಥವಾ ಹಂಡೆ ಹನುಮಪ್ಪನಾಯಕ ಎಂದು ತಮ್ಮ ಮುನ್ನುಡಿಯಲ್ಲಿ ಡಾ.ಎಸ್.ವಿ.ಅಯ್ಯನಗೌಡರ ಹಿರಿಯ ಸಂಶೋಧಕರು ತಿಳಿಸಿದ್ದಾರೆ.
scpatil.art@gmail.com
©2024 Book Brahma Private Limited.