ಪಾರ್ಶ್ವನಾಥರು ವ್ಯಕ್ತಿಚಿತ್ರಣ ರೇಖಿಸುವಲ್ಲಿ ಸಿದ್ಧಹಸ್ತರು. ಈ ನಿಟ್ಟಿನಲ್ಲಿ 'ವ್ಯಕ್ತಿ' 'ಶಕ್ತಿ', 'ನಮ್ಮ ನಿಮ್ಮವರು', 'ಹೆಚ್.ಕೆ. ಯೋಗಾನರಸಿಂಹ, 'ವಿ' ರಾಮಮೂರ್ತಿ ಎಂಬ ಗ್ರಂಥಗಳು ಪ್ರಕಟವಾಗಿವೆ. ಪ್ರಸ್ತುತ 'ಧೀಮಂತರು' ಇದೇ ಪ್ರಕಾರಕ್ಕೆ ಸೇರುವ ಕೃಷಿಯಾಗಿದೆ. ಇದರಲ್ಲಿ 40 ವ್ಯಕ್ತಿಗಳ ಚಿತ್ರಣವಿದೆ. ಈ ವ್ಯಕ್ತಿಗಳು ಸಾಹಿತ್ಯ, ಧಾರ್ಮಿಕ, ರಂಗಭೂಮಿ, ಜಾನಪದ, ವೈದ್ಯಕೀಯ, ಸಂಘಟನೆ, ಪತ್ರಿಕಾರಂಗ ಹೀಗೆ ವಿಭಿನ್ನ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವ ರಾಗಿದ್ದಾರೆ. ಡಾ. ಪಾರ್ಶ್ವನಾಥರು ಪ್ರತಿಯೊಬ್ಬ ವ್ಯಕ್ತಿಯ ಸಾಧನೆ ಮತ್ತು ವೈಶಿಷ್ಟ್ಯಗಳನ್ನು ತುಂಬ ಆಪ್ತವಾಗಿ, ಲಲಿತವಾದ ಶೈಲಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ಹಾಗಾಗಿ ಓದುಗರನ್ನು ಸೆಳೆಯುವಲ್ಲಿ ಕೃತಿ ಯಶಸ್ವಿಯಾಗಿದೆ. ಇಲ್ಲಿನ ಲೇಖನಗಳು ವ್ಯಕ್ತಿಗತ ಸಾಧನೆಯ ಜೊತೆಗೆ, ಆ ನಿರ್ದಿಷ್ಟ ಕಾಲಘಟ್ಟದಲ್ಲಿ ಆಯಾ ಕ್ಷೇತ್ರದಲ್ಲಿ ನಡೆದಂಥ ಕಾರ್ಯಗಳನ್ನೂ ಸಾಂದರ್ಭಿಕ ವಾಗಿ ದಾಖಲಿಸುವುದರಿಂದ ಇಲ್ಲಿನ ಮಾಹಿತಿಗಳು ಸಂಶೋಧಕರಿಗೂ ಉಪಯುಕ್ತವಾಗಬಲ್ಲವು. ಡಾ. ಪಾರ್ಶ್ವನಾಥರು ಮಾತಿನ ಮೋಡಿಗಾರರು, 'ಧೀಮಂತರು' ಕೃತಿ ಕೂಡ ತನ್ನ ಮೋಹಕ ನಿರೂಪಣೆಯಿಂದ ಕನ್ನಡಿಗರಿಗೆ ಆಪ್ಯಾಯಮಾನವಾಗಬಲ್ಲುದು ಎಂದು ಡಾ. ವೈ.ಸಿ. ಭಾನುಮತಿ ಅವರು ಪುಸ್ತಕದ ಬೆನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.