ಡಾ. ಅಮರೇಶ ಯತಗಲ್ ಅವರು ವಿಜಯನಗರೋತ್ತರ ಕರ್ನಾಟಕ ಚರಿತ್ರೆಯಲ್ಲಿ ಸುರಪುರ ಸಂಸ್ಥಾನದ ಸ್ಥಾನವು ಮಹತ್ವವಾದುದೆಂಬ ಸಂಗತಿಯನ್ನು ’ಚಾರಿತ್ರಿಕ ಸುರಪುರ ಅಧ್ಯಯನಾತ್ಮಕ ನೋಟಗಳು’ ಕೃತಿಯ ಮೂಲಕ ಸ್ಪಷ್ಟಪಡಿಸಿದ್ಧಾರೆ.
ಆಡಳಿತಾತ್ಮಕ , ಧಾರ್ಮಿಕ , ಸಾಂಸ್ಕೃತಿಕ ಆಯಾಮಗಳ ವಿವೇಚನೆಯನ್ನು,ಪುರುಷಕಾರಿ ಲೋಕಯ್ಯನ ದಾಖಲೆಯಲ್ಲಿ ಸುರಪುರ ಸಂಸ್ಥಾನದ ವೃತ್ತಾಂತಗಳನ್ನು, ಮುಜಮದಾರ ಲಿಂಗಪ್ಪನ ಕುರಿತ ಬರಹಗಳನ್ನು ಸಾಂಸ್ಕೃತಿಕ ಹಾಗೂ ವಸ್ತುನಿಷ್ಠ ಚರಿತ್ರೆಯ ಮೂಲಕ ಈ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ.
ಸುರಪುರ ಸಂಸ್ಥಾನದ ಅರಸುಗಳು ಮತ್ತು ಅವರ ಮೂಲನೆಲೆಗಳನ್ನು ಕುರಿತಾದ ಇವರ ಅಧ್ಯಯನಶೀಲತೆಯು ಸುರಪುರ ಸಂಸ್ಥಾನದ ನಾಣ್ಯಗಳು, ಚಿತ್ರಕಲೆ, ಶಿಕ್ಷಣ ವ್ಯವಸ್ಥೆ, ಸೈನ್ಯ ವ್ವವಸ್ಥೆಗಳ ಬಗ್ಗೆಯೂ ಸಾಕಷ್ಟು ವಿವರಗಳನ್ನು ನೀಡಿದೆ. ಸುರಪುರ ಸಂಸ್ಥಾನದ ರಾಣಿಯರು, ಚಾರಿತ್ರಿಕ ವಿಶ್ಲೇಷಣೆ. ಮತ್ತು ಸಂಸ್ಥಾನ ಕುರಿತ ಅಧ್ಯಯನಗಳ ಅನೇಕ ವಿವರಗಳನ್ನೊಳಗೊಂಡ ’ಚಾರಿತ್ರಿಕ ಸುರಪುರ ಅಧ್ಯಯನಾತ್ಮಕ ನೋಟಗಳು’ ಸಂಶೋಧನೆಗೆ ನೆರವಾಗುವ ಪರಾಮರ್ಶನ ಕೃತಿಯಾಗಿದೆ.
©2024 Book Brahma Private Limited.