ಬಿಜಾಪುರ ಭವ್ಯ ಪರಂಪರೆ ನಾಗರಾಜ ಕಾಪಸಿ ಅವರ ಸಂಕ್ಷಿಪ್ತ ಇತಿಹಾಸ ಪುಸ್ತಕವಾಗಿದೆ. ಕರ್ನಾಟಕದ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಸುದೀರ್ಘವಾದ ಇತಿಹಾಸವಿದೆ. ಕಲೆ ಮತ್ತು ವಾಸ್ತುಶಿಲ್ಪದ ದೃಷ್ಟಿಯಿಂದ ಕನ್ನಡ ನಾಡು ಭವ್ಯ ಪರಂಪರೆಯನ್ನು ಹೊಂದಿದೆ. ಈ ಬಿಜಾಪುರ ಭವ್ಯ ಪರಂಪರೆ ಕೃತಿಯನ್ನು ಅವಲೋಕಿಸಿದಲ್ಲಿ ಕಲೆ ಮತ್ತು ವಾಸ್ತುಶಿಲ್ಪಕ್ಕೆ ಸಂಬಂಧಪಟ್ಟಂತೆ ಸರಳ ಶೈಲಿಯಲ್ಲಿ ಬಹಳಷ್ಟು ವಿಷಯಗಳು ಈ ಕೃತಿಯಲ್ಲಿ ಸಂಕ್ಷಿಪ್ತ ರೂಪದಲ್ಲಿ ಅಡಕಗೊಂಡಿವೆ. ಇಂತಹ ಕೃತಿಯನ್ನು ಓದಿದಾಗ ಬಿಜಾಪುರದಲ್ಲಿರುವ ಸ್ಮಾರಕಗಳನ್ನು ಮತ್ತೊಮ್ಮೆ ನೋಡಬೇಕೆನಿಸುತ್ತದೆ. ಇಂತಹ ಸಮಗ್ರ ಮಾಹಿತಿಯು ಚಿತ್ರಗಳ ಸಹಿತ ಸಂಶೋಧಕರಿಗೂ, ಪ್ರವಾಸಿಗರಿಗೂ ಹಾಗೂ ಜನಸಾಮಾನ್ಯರಿಗೂ ತಿಳಿಯುವಂತಿದೆ. ಇಂತಹದೊಂದು ಜನಪ್ರಿಯ ಕೃತಿಯನ್ನು ಓದಿ ಕನ್ನಡನಾಡಿನ ಜನತೆಯು ಪೂರ್ಣ ಪ್ರಯೋಜನವನ್ನು ಪಡೆಯುವಂತಾಗಲಿ ಎಂದು ತಿಳಿಸುತ್ತೇನೆ. ಇಂತಹ ಬಿಜಾಪುರ ಭವ್ಯ ಪರಂಪರೆ ಕೃತಿಯು ಕಲೆ ಮತ್ತು ವಾಸ್ತುಶಿಲ್ಪವನ್ನು ಕೇಂದ್ರವಾಗಿಟ್ಟುಕೊಂಡು ಸ್ಪರ್ಧಾ ವಿದ್ಯಾರ್ಥಿಗಳು ಹಾಗೂ ಪ್ರವಾಸಿಗರನ್ನು ಗಮನದಲ್ಲಿಟ್ಟುಕೊಂಡು ಕಾಪಸಿಯವರು ಈ ಪುಸ್ತಕವನ್ನು ಹೊರತರುವ ಕಾರ್ಯವನ್ನು ಹಮ್ಮಿಕೊಂಡಿರುತ್ತಾರೆ. ಆಧುನಿಕ ಕಾಲದ ಹೊಸ ಪರ್ವದಲ್ಲಿ ನಾವಿದ್ದೇವೆ. ಇಂತಹ ಭವ್ಯ ಕಲೆ ಮತ್ತು ವಾಸ್ತುಶಿಲ್ಪ ಪರಂಪರೆಯನ್ನು ಉಳಿಸಿ, ಬೆಳೆಸುವ ಮಹತ್ಕಾರ್ಯದಲ್ಲಿ ನಾವೆಲ್ಲರೂ ಕೈಜೋಡಿಸೋಣ. ಪೊಲೀಸ್ ಇಲಾಖೆಯು ಕೂಡಾ ಅನೇಕ ಹೊಸತನದ ಪುನರು ತ್ಥಾನಕ್ಕೆ ಕಾರಣವಾಗಿದೆ. ಈ ಮೂಲಕ ಪೊಲೀಸರು ವಿವಿಧ ಕ್ಷೇತ್ರಗಳಲ್ಲಿ ಅಧ್ಯಯನ ಆಸಕ್ತಿ ಬೆಳೆಸಲು ಇಲಾಖೆಯ ಕ್ರಿಯಾ ಯೋಜನೆಗಳು ಪ್ರಮುಖವಾಗಿವೆ. ಈ ಕೃತಿಯ ಲೇಖಕರಾದ ಕಾಪಸಿಯವರು ಅತ್ಯಂತ ಪರಿಶ್ರಮಪೂರ್ವಕವಾಗಿ ಈ ಕೃತಿಯನ್ನು ರಚಿಸಿದ್ದಾರೆ. ಅವರಿಗೆ ನಮ್ಮ 7ನೇ ಪಡೆ ಕೆ.ಎಸ್.ಆರ್.ಪಿ. ಮಂಗಳೂರು ಘಟಕದ ಪರವಾಗಿ ಅಭಿನಂದನೆಗಳನ್ನು ಸಲ್ಲಿಸುತ್ತಾ ಅವರ ಎಲ್ಲಾ ಜನಗಳು ಫಲಪ್ರದ ವಾಗಲಿ ಎಂದು ಹಾರೈಸುತ್ತೇನೆ ಎಂದು ಬಿ.ಎಂ. ಪ್ರಸಾದ್ ಕಮಾಡೆಂಟ್ ಅವರು ಪುಸ್ತಕದ ಮುನ್ನುಡಿಯಲ್ಲಿ ತಿಳಿಸಿದ್ದಾರೆ.
©2024 Book Brahma Private Limited.