ದೇಶದ ಬೃಹತ್ ನಗರಗಳಲ್ಲಿ ಬೆಂಗಳೂರಿನ ವಿಸ್ತಾರ, ಇತಿಹಾಸ ಬಹುದೊಡ್ಡ ಚರಿತ್ರೆಯೆಂದೇ ಹೇಳಬಹುದು. ಬೆಂಗಳೂರಿನ ಇತಿಹಾಸದ ಬಗ್ಗೆ ನಡೆದಿರುವ ಸಂಶೋಧನೆಗಳಲ್ಲಿ ಎಸ್. ಕೆ. ಅರುಣಿ ಅವರ ’ಬೆಂಗಳೂರು ಪರಂಪರೆ ಇತಿಹಾಸ ಸಂಶೋಧನೆಯ ಹೊಸ ನೋಟಗಳು’ ಅಪರೂಪದ ಕೃತಿಯಾಗಿದೆ. ಬೆಂಗಳೂರಿನ ಸಾಂಸ್ಕೃತಿಕ ಕಥನ, ಸಾಂಸ್ಕೃತಿಕ ಪಲ್ಲಟ, ವೈಭವ, ಕೋಟೆಗಳು, ದೇವಾಲಯಗಳು, ಅರಮನೆ ಕರಗೋತ್ಸವದ ಹಿನ್ನೆಲೆ, ಸಂಪ್ರದಾಯ ಮಹತ್ವಗಳನ್ನು ಸಂಪೂರ್ಣವಾಗಿ ಚಿತ್ರಿಸಿದೆ. ಬೆಂದಕಾಳೂರು ಆಧುನಿಕ ಬೆಂಗಳೂರು ನಗರವಾಗಿ ಮಾರ್ಪಾಡಾದ ಚರಿತ್ರೆ ಹಿನ್ನೆಲೆಯನ್ನು ಅಮೂಲಾಗ್ರವಾಗಿ ಚಿತ್ರಿಸಿದೆ. ಬೆಂಗಳೂರು ನಗರದ ಪ್ರತಿಯೊಂದು ನಗರಗಳ ಬಗ್ಗೆಯೂ ಚಾರಿತ್ರಿಕವಾದ ಸಂಶೋಧನೆಯನ್ನು ನಡೆಸಿದೆ.
©2024 Book Brahma Private Limited.