ಎಸ್. ಕೆ ಅರುಣಿಯವರು ಯಾದಗಿರಿ ಜಿಲ್ಲೆಯ ಶಹಾಪುರದವರು. ಕೇಂದ್ರ ಸರ್ಕಾರದ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ತಿನಲ್ಲಿ 20 ವರ್ಷಗಳ ಕಾಲ ಕಾರ್ಯ ನಿರ್ವಹಿಸಿದ್ದಾರೆ. ಬೆಂಗಳೂರಿನ ದಕ್ಷಿಣ ಪ್ರಾದೇಶಿಕ ಕೇಂದ್ರದ ಉಪ-ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಶೋಧನೆಯ ಹಾದಿ ಹಿಡಿದಿರುವ ಇವರು ಕರ್ನಾಟಕ ಇತಿಹಾಸ, ಪುರಾತತ್ತ್ವ, ವಾಸ್ತುಶಿಲ್ಪ, ಶಿಲ್ಪಕಲೆಗೆ ಸಂಬಂಧಿಸಿದ ಸಂಶೋಧನೆಯ ಕೃತಿಗಳನ್ನು ರಚಿಸಿದ್ದಾರೆ. ಇವರ ಕರ್ನಾಟಕ ಪುರಾತತ್ವದ ಅಧ್ಯಯನಗಳನ್ನು ಸಂಪಾದಿತ ಕೃತಿಯಾಗಿ ಹೊರತಂದಿದ್ದಾರೆ. ದಖ್ಖನಿ ಚಿತ್ರಕಲೆ (2001), ಯಲಹಂಕ ನಾಡಪ್ರಭುಗಳ ವಾಸ್ತುಶಿಲ್ಪ ಮತ್ತು ಶಿಲ್ಪಕಲೆ (2007), Surapura Samsthana – Historical and Archaeological Study of a Poligar state in South India (2004) ಇವರ ಸಂಶೋಧನೆಯ ಪ್ರಮುಖ ಕೃತಿಗಳಾಗಿವೆ.
Gems of Scholarships- Archaeology & Antiquities: Selected Articles from the QJMS 1909-2009 (2009); ಕರ್ನಾಟಕದಲ್ಲಿ ಪುರಾತತ್ವ ಅಧ್ಯಯನಗಳು (2010) ಹಾಗೂ ನಮ್ಮ ಬೆಂಗಳೂರು (2012) ಇವರ ಸಂಪಾದಿತ ಕೃತಿಗಳಾಗಿವೆ. ಅಲ್ಲದೆ, ದಿ ಹಿಂದೂ ಮತ್ತು ಸಂಯುಕ್ತ ಕರ್ನಾಟಕ ಪತ್ರಿಕೆಗಳಲ್ಲಿ ಇವರ ಅಂಕಣ ಬರಹಗಳು ಪ್ರಕಟವಾಗಿವೆ.