ಹಾಲುಮತ ಭಾಸ್ಕರ ಹಾಗೂ ಚಂದ್ರಶೇಖರ ಬಿಜ್ಜರಗಿ ಅವರ ಸಂಪಾದಕತ್ವದ ಇತಿಹಾಸ ಕುರಿತ ಕೃತಿ-ಬಳ್ಳಾರಿ ಪಾಳೆಗಾರ ಬಾಲದ ಹನುಮಪ್ಪ ನಾಯಕ. 16 ನೇ ಶತಮಾನದಲ್ಲಿ ಆಳಿದ ಬಳ್ಳಾರಿ ಪಾಳೆಗಾರ ಬಾಲದ ಹನುಮಪ್ಪ ನಾಯಕನ ಪೂರ್ವಜರು ಕಂಬಳಿ ನೇಕಾರರಾಗಿದ್ದು, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಇತಿಹಾಸ ಪ್ರಸಿದ್ಧ ಬಾಗಳಿಯ ಲಕ್ಕೇಶ್ವರ (ಬೀರೇಶ್ವರ)ಈ ಮಂದಿರದ ಪೂಜಾರಿ ಮನೆತನಕ್ಕೆ ಸೇರಿದವರು. ಆದ್ದರಿಂದ ಬಾಲದ ಹನುಮಪ್ಪ ನಾಯಕನ ತಂದೆ ಲಕ್ಕಿಗೌಡನೆಂದು ಪ್ರಸಿದ್ಧ. ಹರಪನಹಳ್ಳಿ ತಾಲೂಕು ಕೇಂದ್ರದಿಂದ 10 ಕಿ.ಮಿ ಅಂತರದಲ್ಲಿರುವ ಇತಿಹಾಸ ಪ್ರಸಿದ್ಧ,ಶಾಸನಸ್ತ ಗ್ರಾಮ ಹರಪನಹಳ್ಳಿ ತಾಲೂಕಿನ ಮುತ್ತಗಿಯವರು. ಮುತ್ತಗಿ ಯಲ್ಲಿ ಗ್ರಾಮ ದೇವತೆ ಹನುಮಂತನ(ಆಂಜನೇಯ) ಮಂದಿರ.ಆದ್ದರಿಂದ ಹನುಮಪ್ಪ ನಾಯಕನಿಗೆ ಹನುಮಪ್ಪ ಎಂದು ಅವರ ತಂದೆ -ತಾಯಿಗಳು ಹೆಸರಿಟ್ಟರು. ಈ ಹನಮಂತ ಹುಟ್ಟುವಾಗಲೇ ಪೃಷ್ಠದ ಸ್ಥಳ ಬಾಲ (ಬೇಳೆಯವ ಸ್ಥಳ) ದಲ್ಲಿ ಗೇಣು ಉದ್ದ ದುರ್ಮಾಂಸ ಬೇಳೆದಿದ್ದರಿಂದ, ಗ್ರಾಮದಲ್ಲಿ ಹತ್ತಿಪ್ಪತ್ತು ಜನರ ಹೆಸರು ಹನುಮಪ್ಪ ಎಂದಿರುವದರಿಂದ ಅವರೆಲ್ಲರನ್ನು ಪ್ರತ್ತೆಕಿಸಲೂ ಆತನಿಗೆ ಚಿಕ್ಕಂದಿನಲ್ಲಿಯೇ ಬಾಲದ ಹನುಮಪ್ಪ ಎಂದು ಹೆಸರು ಅಂಟಿ ಕೊಂಡಿತು.
ಬಾಲದ ಹನುಮಪ್ಪ ನು ವೀರಶೈವ -ಲಿಂಗಾಯತ ನಾಗಿರಲಿಲ್ಲ.ಅವನ ಮನೆ ದೇವರು ಸೊನ್ನಲಿಗೆಯ ಸಿದ್ಧರಾಮ ನಾಗಿರದೆ ಬಳ್ಳಾರಿ ಅನಂತಪೂರ ಜಿಲ್ಲೆಗಳಲ್ಲಿ ಪ್ರಸಿದ್ಧಿಯಾಗಿರುವ ಭೈರವ ಮೂಲದ ಮತ್ತು ಕುರುಬರ ಒಡೆಯರ ಸಮುದಾಯಕ್ಕೆ ಸೇರಿದ ಸಿದ್ಧರಾಮ ಆಗಿದ್ದನು ಆದ್ದರಿಂದ ಬಳ್ಳಾರಿ ಮತ್ತು ಅನಂತಪುರ ಜಿಲ್ಲೆಯಗಳಲ್ಲಿ ಸಿದ್ಧರಾಮನ ಕ್ಷೇತ್ರಗಳಿದ್ದು ಹಲವಾರು ಕ್ಷೇತ್ರಗಳಿಗೆ ಬಾಲದ ಹನುಮಪ್ಪ ನಾಯಕ ಮತ್ತು ಅವನ ವಂಶಜರು ದತ್ತಿ ದಾನ ಗಳನ್ನು ಅರ್ಪಿಸಿ ಸಿದ್ಧರಾಮಪುರ ಎಂದು ಹೆಸರಿಸಿದ್ಧರು. ಇತ್ತೀಚಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯ ಬಸವನಬಾಗೆವಾಡಿ,ಮುದ್ದೆಬಿಹಾಳ ತಾಲೂಕಿನ ವಾಸಿಸುತ್ತಿರುವ ಹಂಡೆ ಕುರುಬ ಸಮುದಾಯದ ಕೆಲವು ಮುಖಂಡರು ತಾವು ವೀರಶೈವ ಹಂಡೆ ವಜೀರ್ ಎಂದುದು ತಮ್ಮ ಜಾತಿಯನ್ನು ವೈಭವಿಕರಿಸಿಕೊಳ್ಳಲು ಪಾಳೆಗಾರ ಬಾಲದ ಹನುಮಪ್ಪ ನಾಯಕನು ವಿಜಯಪುರ ಜಿಲ್ಲೆಯ ಬಸವನಗೆವಾಡಿ ತಾಲೂಕಿನ ಮುತ್ತಗಿಯವನೆಂದು ಸುಳ್ಳು ಪ್ರಚಾರ ಮಾಡಿ ಇತಿಹಾಸ ವನ್ನು ತಿರುಚಲು ಸಾಕ್ಷ್ಯಾಧಾರಗಳಿಲ್ಲದೇ, ಶಾಸನಾಧಾರಗಳನ್ನು ಬಳಸಿ ಕೊಳ್ಳದೇ ಪುಸ್ತಕಗಳನ್ನು ಪ್ರಕಟಿಸಿ ಇತಿಹಾಸವನ್ನು ತಿರುಚುವ ಪ್ರಯತ್ನ ಮಾಡಿದ್ದರು. ಆದ್ದರಿಂದ ಬಾಲದ ಹನುಮಪ್ಪ ನಾಯಕನು ಮತ್ತು ಅವನ ವಂಶಜರು ಆಳಿಕೆ ಮಾಡಿದ ಬಳ್ಳಾರಿ, ರಾಯಚೂರಿನ ಕೆಲವು ಭಾಗ ಮತ್ತು ಆಂದ್ರದ ಅನಂತಪುರ ಜಿಲ್ಲೆಗಳಲ್ಲಿ ಕ್ಷೇತ್ರಕಾರ್ಯ ಕೈಕೊಂಡು ಶಾಸನಾಧಾರಗಳನ್ನು ಬಳಸಿ ವಾಸ್ತವ ಇತಿಹಾಸವನ್ನು ಈ ಕೃತಿಯಲ್ಲಿ ಕಟ್ಟಿಕೊಡಲಾಗಿದೆ.
©2024 Book Brahma Private Limited.