‘ಬದುಕಿಗೊಂದು ಸಂಹಿತೆ’ ಲೇಖಕ ಪಿ.ಎಸ್. ರಾಮಾನುಜಂ ಅವರ ಕೃತಿ. ಪ್ರಾಚೀನ ಭಾರತದ ಚಿಂತನಗಳೆಂದರೆ ಕೇವಲ ಆಧ್ಯಾತ್ಮಿಕ ಚಿಂತನೆಗಳೇ ಎಂಬ ಅಭಿಪ್ರಾಯ ಹಲವರಲ್ಲಿದೆ. ಆದರೆ, ಆಧ್ಯಾತ್ಮಿಕ ವಿಚಾರಗಳಲ್ಲದೆ ಲೌಕಿಕ ಜೀವನಕ್ಕೆ ಬೇಕಾದ ಅಂದರೆ ಇಹೋಪಯೋಗಿಯಾದ, ಯಶಸ್ವೀ ಜೀವನವನ್ನು ಕಲಿಸುವ ವಿಚಾರಧಾರೆಯು ಸಮಾನಾಂತರವಾಗಿ ಪ್ರಾಚೀನ ಸಾಹಿತ್ಯವನ್ನು ವ್ಯಾಪಿಸಿಕೊಂಡಿದೆ. ಪರದಷ್ಟೇ ಇಹವೂ ಭಾರತೀಯ ಮನಸ್ಸನ್ನು ಆಕ್ರಮಿಸಿತ್ತು ಎಂಬ ವಿಷಯ ಈ ಚಿಂತನೆಗಳನ್ನು ನೋಡಿದಾಗ ಸ್ಪಷ್ಟವಾಗುತ್ತದೆ. ಈ ವಿಚಾರಗಳು ಸಂಸ್ಕೃತದಲ್ಲಿ ಸುಭಾಷಿತಗಳ ರೂಪದಲ್ಲಿ ನಯಶಾಸ್ತ್ರ ಮುಂತಾದ ಜ್ಞಾನ ಶಾಖೆಗಳ ಗ್ರಂಥಗಳಲ್ಲಿ, ಕಾವ್ಯನಾಟಕಾದಿಗಳಲ್ಲಿ ಈಗ ಉಳಿದು ಬಂದಿದೆ. ಇವುಗಳಲ್ಲಿ ಎಲ್ಲ ಕಾಲಕ್ಕೂ ಅನ್ವಯಿಸುವ ನೀತಿಯಿದೆ, ರಾಜನೀತಿ ಇದೆ, ಮನುಷ್ಯನ ಮನಸ್ಸಿನ ಅಧ್ಯಯನವಿದೆ. ಬದುಕಲು ಬೇಕಾದ ಸೂತ್ರಗಳಿವೆ. ವ್ಯಕ್ತಿಗೂ ಸಮಾಜಕ್ಕೂ ಪ್ರಗತಿ ಸಾಧಿಸಲು ಅವಶ್ಯಕವಾದ ಮನಃಸ್ಥಿತಿಯ ಬಗ್ಗೆ ಚಿಂತನೆ ಇದೆ. ಇಂತಹ ಹಲವು ಚಿಂತನೆಗಳ ಸಂಗ್ರಹವೇ ಈ ಸಂಕಲನ. ಸಾವಿರಾರು ವರ್ಷಗಳ ಸಂಸ್ಕಾರದಿಂದ ಪಕ್ವವಾದ ಒಂದು ಸಮಾಜದ ದನಿಯಾಗಿ ಹೊರಬಂದಿರುವ ಈ ವಿಚಾರಗಳು ಸಾರ್ವಕಾಲಿಕವಾದವು.
©2024 Book Brahma Private Limited.