ಪ್ರತಿಯೊಂದು ಜೀವಿಯ ವರ್ತನೆಯ ಹಿಂದೆಯು ಅದರದೆ ಆದ ಮನೋವೃತ್ತಿ ಇರುತ್ತದೆ. ಅಂತೆಯೇ ಮಕ್ಕಳು ಬೆಳೆದು ಶಾಲೆಗೆ ಹೋಗಿ ಜ್ಞಾನ ಸಂಪಾದಿಸುವುದರ ಜೊತೆಗೆ ಅವರಿಗೆ ನೈತಿಕ ಬುನಾದಿ, ವಿನಯ ಶ್ರದ್ಧೆ, ಚಾರಿತ್ರ್ಯ ನಿರ್ಮಾಣ ಮಾಡುವ ಮನೋ ಶಿಕ್ಷಣವೂ ಅಗತ್ಯ.. ಈ ನಿಟ್ಟಿನಲ್ಲಿ ಹೆತ್ತವರು ಓದಿ ಮಕ್ಕಳಿಗೆ ತಿಳುವಳಿಕೆ ನೀಡುವಂತಹ ಸಾಹಿತ್ಯದ ಜೊತೆಗೆ ಮಕ್ಕಳು ತಾವೇ ಓದಿ ಅರ್ಥೈಸಿಕೊಳ್ಳುವಂತಹ ಸಾಹಿತ್ಯವು ಅಗತ್ಯವೆನ್ನಿಸಿ ಆಕಾಶಕ್ಕೆ ಈಣಿ ಎಂಬ ವ್ಯಕ್ತಿತ್ವ ವಿಕಸನದ ಕೃತಿಯನ್ನು ಗಿರಿಮನೆ ಶ್ಯಾಮರಾವ್ ರಚಿಸಿದ್ದಾರೆ. ಮಕ್ಕಳಿಗೆ ಕುತೂಹಲ ಕೆರಳಿ ಅವರಾಗಿಯೇ ಓದಿ ತಿಳಿದುಕೊಳ್ಳುವ ತನ್ಮೂಲಕ ಮಾನಸಿಕ ವಿಕಸನಕ್ಕೂ ಪೂರಕವಾಗುವಂತಹ ಕೃತಿ ಆಕಾಶಕ್ಕೆ ಏಣಿ. ಪ್ರಸ್ತುತ ಕಾಲದಲ್ಲಿ ಟಿ.ವಿ ಎಂತಹ ಮಾಧ್ಯಮಗಳು ಮಕ್ಕಳನ್ನು ದಾರಿ ತಪ್ಪಿಸುತ್ತಿವೆ. ಹೀಗಾಗಿ ಮಾನಸಿಕ ವಿಕಸನ ಹಾಗೂ ದೈಹಿಕ ಆರೋಗ್ಯಕ್ಕೆ ಮಾರಕವಾದ ಕೂತಲ್ಲೇ ಕೂರುವ ಯಂತ್ರಗಳಾಗುತ್ತಿದ್ದಾರೆ ಮಕ್ಕಳು. ಹೀಗಾಗಿ ಮಕ್ಕಳ ಕಲ್ಪನೆಗಳನ್ನು ಗರಿಗೆದರಿಸಿ ಅವರನ್ನು ಭಾವನಾ ಲೋಕಕ್ಕೆ ಕರೆದೊಯ್ಯುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ ಇರಿಮನೆ ಶ್ಯಾಮರಾವ್. ಈ ಕೃತಿಯಲ್ಲಿನ ಹಾಡು, ಕಥೆ, ನೀತಿಕಥೆ, ಪ್ರಶ್ನೋತ್ತರ, ಒಗಟು, ತಮಾಷೆ ಮಕ್ಕಳಿಗೆ ಸ್ವಸ್ಥ ಶರೀರ ಮತ್ತು ಸ್ವಸ್ಥ ಮನಸ್ಸನ್ನು ರೂಪಿಸಲು ಸಹಾಯ ಮಾಡುತ್ತದೆ.
©2024 Book Brahma Private Limited.