About the Author

ಡಾ.ಕೆ. ಮೋಹನ್ ಕೃಷ್ಣ ರೈ, 1969 ರ ಏ.27 ರಂದು ಜನಿಸಿದರು. ಎಂ.ಎ ಪಿ.ಎಚ್  ಡಿ ಪದವೀಧರರು. ಚರಿತ್ರೆ ವಿಭಾಗದ ಪ್ರಾಧ್ಯಾಪಕರು. ಮಧ್ಯಕಾಲೀನ ಹಾಗು ಆಧುನಿಕ ಭಾರತದ ಚರಿತ್ರೆ, ಆಧುನಿಕ ಯುರೋಪಿನ ಚರಿತ್ರೆ, ಭಾರತದ ನಗರ ಚರಿತ್ರೆ ವಿಷಯಗಳಲ್ಲಿ ಪರಿಣತಿ. ನಗರ ಚರಿತ್ರೆ, ಸಂಸ್ಕ್ರತಿ ಚರಿತ್ರೆ, ಪರಿಸರ ಚರಿತ್ರೆ ಅಧ್ಯಯನದ ಆಸಕ್ತಿಯ ಕ್ಷೇತ್ರಗಳು. 

’ಪರಿಸರ ಚಳವಳಿಗಳು , ಪ್ರಭುತ್ವ ಮತ್ತು ಜನತೆ, ಕೆನರಾ ವಿಭಜನೆ , ವಸಾಹತುಶಾಹಿ ಮತ್ತು ನಗರೀಕರಣ ’ ಪ್ರಕಟಿತ  ಕೃತಿಗಳು. ಪೋರ್ಚುಗೀಸ್ ಹೆಜಿಮನಿ ಓವರ್ ಮಂಗಳೂರ್‌, ಚಿರಿತ್ರೆ ವರ್ತಮಾನ ಕಥನ, ರಾಣಿ ಅಬ್ಬಕ್ಕಳ ರಾಜಕೀಯ ನೈಪುಣ್ಯ ಇತ್ಯಾದಿ ಸಂಶೋಧನಾ ಲೇಖನಗಳು.

ಕಲೋನಿಸಂ ಆಂಡ್ ಆಫ್ಟೆರ್ ಮುಂತಾದ ರಾಷ್ಟ್ರೀಯ- ಅಂತಾರಾಷ್ಟ್ರೀ ಯ ಕಾರ್ಯಗಾರಗಳಲ್ಲಿ ಭಾಗವಹಿಸಿದ್ದು, ಸಂಶೋಧನಾ  ಯೋಜನೆಗಳ ಪೂರೈಕೆ, ಸ್ವತಂತ್ರ ಕೃತಿಗಳ ಪ್ರಕಟಣೆ, ಸಂಪಾದಿತ ಲೇಖನಗಳ ಪ್ರಕಟಣೆ ಮೊದಲಾದವು ಇವರ ಸಾಧನೆಗಳು. 



 

ಕೆ. ಮೋಹನಕೃಷ್ಣ ರೈ

(27 Apr 1969)