ಲ.ನ. ಸ್ವಾಮಿ ಅವರು 1962ರಂದು ಮಂಡ್ಯದಲ್ಲಿ ಜಿಲ್ಲೆಯಲ್ಲಿ ಜನಿಸಿದರು. ಮೈಸೂರಿನಲ್ಲಿ ವಿದ್ಯಾಭ್ಯಾಸ ಪೂರೈಸಿ ಎಎಸ್‌ಐ, ಸೆಂಟರ್ ಫಾರ್ ಹಿಸ್ಟರಿ ಆಂಡ್ ಫಿಲಾಸಫಿ ಆಫ್ ಸಯನ್ಸ್, ತಮಿಳ್ ಯೂನಿವರ್ಸಿಟಿ, ಮುಂತಾದ ಸಂಸ್ಥೆಗಳಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಮೈಸೂರಿನ ಥೆರೆಶಿಯನ್ ಕಾಲೇಜು, ಜೆಎಸ್‌ಎಸ್ ಕಾಲೇಜು ಮತ್ತು ನಟರಾಜ ಕಾಲೇಜುಗಳಲ್ಲಿ ಇತಿಹಾಸ ಪ್ರಧ್ಯಾಪಕರಾಗಿಯೂ ಕೆಲಸ ಮಾಡಿದ ಅನುಭವ ಇವರದು. ಬರವಣಿಗೆ ಇವರ ಹವ್ಯಾಸ. ಕನ್ನಡ- ಆಂಗ್ಲ ಭಾಷೆಯಲ್ಲಿ 25ಕ್ಕೂ ಹೆಚ್ಚು ಸಂಶೋಧನ ಗ್ರಂಥಗಳನ್ನು ಪ್ರಕಟಿಸಿದ್ದಾರೆ, ಹಾಗೂ ಸಾಕಷ್ಟು ಸಂಖ್ಯೆಯಲ್ಲಿ ಸಂಶೋಧನಾ ಪ್ರಬಂಧಗಳನ್ನು ರಚಿಸಿ ವಿವಿಧ ವೇದಿಕೆಗಳಲ್ಲಿ ಮಂಡಿಸಿದ್ದಾರೆ. ಪ್ರಕಟಿತ ಕೃತಿಗಳು: ವೆಂಕಾಮಾತ್ಯ, ಪುರಾವೃತ್ತಾಂತ (ಸಂಶೋಧನ ಲೇಖನಗಳ ಸಂಗ್ರಹ)