About the Author

ಲೇಖಕ ಡಾ. ಚನ್ನಬಸವಯ್ಯ ಹಿರೇಮಠ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದವರು. ತಂದೆ- ವೀರಭದ್ರಯ್ಯ ಹಿರೇಮಠ, ತಾಯಿ- ಗೌರಮ್ಮ. ಚನ್ನಬಸವಯ್ಯ ಎಂ.ಎ. ಹಾಗೂ ಪಿಎಚ್ ಡಿ  ಪದವೀಧರರು. ಸ್ನಾತಕೋತ್ತರ ಡಿಪ್ಲೋಮಾ ಇನ್ ಬಸವೇಶ್ವರ ಸ್ಟಡೀಜ್   (ಪ್ರಥಮಸ್ಥಾನ ಚಿನ್ನದ ಪದಕದೊಂದಿಗೆ)  ಸದ್ಯ, ರಾಯಚೂರಿನಲ್ಲಿ ವಾಸವಿದ್ದು, ಅಲ್ಲಿಯ  ಬಿ.ಆರ್.ಬಿ. ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. 

ಕೃತಿಗಳು : (ಸಂಶೋಧನೆ)   ಕುರುಗೋಡು ಸಿಂದರು ಒಂದು ಅಧ್ಯಯನ,  ನಮ್ಮ ಜಿಲ್ಲೆ ಐತಿಹಾಸಿಕ ಪರಿಚಯ, ಎಡೆದೊರೆನಾಡು , ರಾಯಚೂರು ಜಿಲ್ಲೆಯ ಶರಣರು, ಮಸ್ಕಿಯ ಶಾಸನಗಳು, ಸತ್ಯದಹಾದಿ ಸಂಪುಟ-1 ,  ಅಟ್ಟಳೆನಾಡಿನ ಸಿಂದರು , ಪ್ರಾಚೀನ ಕರ್ನಾಟಕದ ರಾಜಕೀಯ ವಿಭಾಗಗಳು,  ಅನಾವರಣ(ಸಂಶೋಧನ ಲೇಖನಗಳು),   ಕಲ್ಯಾಣ ಕರ್ನಾಟಕದ ಸಂಸ್ಕೃತಿ, (ಸಂಪಾದಿತ ಕೃತಿಗಳು)   ರಾಯಚೂರು-ಕೊಪ್ಪಳ ಜಿಲ್ಲೆಯ ಶಾಸನಗಳು ,  ಮಾನ್ವಿ ತಾಲೂಕಿನ ಶಾಸನಗಳು, ಪ್ರಿಯದರ್ಶಿ(ಇತರರೊಂದಿಗೆ) ,  ಬಳಗಾನೂರು ಮರಿಸ್ವಾಮಿಗಳ ಸ್ವರವಚನಗಳು , ವಿರಾಟಪರ್ವ ಸಂಗ್ರಹ,  ಶರಣಪಥ–ಇತರರೊಂದಿಗೆ   {ನ್ಯಾ.ಶಿವರಾಜ ಪಾಟೀೀಲ ಅಭಿನಂದನ ಗ್ರಂಥ},  ರಾಯಚೂರು,  ನಡುಗನ್ನಡ ಕಾವ್ಯ(ಗುವಿವಿ ಪಠ್ಯ) ,   ಹೈದ್ರಾಬಾದ್ ಕರ್ನಾಟಕದ ಸಂಗೀತ ಪರಂಪರೆ, (ಇತರರೊಂದಿಗೆ),  ಹಳಗನ್ನಡ ಕಾವ್ಯ(ಗುವಿವಿ ಪಠ್ಯ),  ಗಂಗರಾಸಿ  , ಕರ್ನಾಟಕ ಗ್ರಾಮ ಚರಿತ್ರೆ ಕೋಶ-ರಾಯಚೂರು ಜಿಲ್ಲೆ, ವಚನ ಸಂಪಾದನೆ(ಗು.ವಿ.ವಿ ಪಠ್ಯ) ,  ಧರ್ಮಾಮೃತ ಸಂಗ್ರಹ(ಗು.ವಿ.ವಿ ಪಠ್ಯ), ಜೀವನ ಚರಿತ್ರೆ,   ಶಾಸ್ತ್ರೀ ಮಲ್ಲನಗೌಡ ,  ಕಾವ್ಯಾನಂದ . 

ಪ್ರಶಸ್ತಿ- ಪುರಸ್ಕಾರಗಳು:  ‘ಸಂಗ’ ಕಥೆ ದ್ವಿತೀಯ ಬಹುಮಾನ (1985) – ಕರ್ನಾಟಕ ವಿವಿ, ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ-ಪ್ರಥಮ ಬಹುಮಾನ(1987) ಬಸವ ಸಮಿತಿ, ಬೆಂಗಳೂರು, ಮಸ್ಕಿಯ  ಲಯನ್ಸ್ ಕ್ಲಬ್ ನಿಂದ ಆದರ್ಶ ಶಿಕ್ಷಕ ಪ್ರಶಸ್ತಿ (1994) ,  ಮಾನ್ವಿ ಕಸಾಪ ನಿಂದ ಉತ್ತಮ ಸಂಶೋಧಕ ಪ್ರಶಸ್ತಿ, ಸಿಂಧನೂರಿನಲ್ಲಿ  ವೀರಶೈವ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷತೆ , ಹರಿಹರದ ಇಂಟರ್ ನ್ಯಾಶನಲ್ ವೀರಶೈವ ಫೌಂಡೇಶನ್ ನಿಂದ ವೀರಶೈವ ದೀಪ್ತಿ ಪ್ರಶಸ್ತಿ, ಲಿಂಗಸೂಗೂರು ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ - ಸರ್ವಾಧ್ಯಕತ್ಷೆ ಗೌರವ, ರಾಯಚೂರಿನ ತಾರಾನಾಥ ಶಿಕ಼್ಣ ಸಂಸ್ಥೆಯಿಂದ  ಎಂ. ನಾಗಪ್ಪ ಸಮಗ್ರ ಸೇವಾ ಪ್ರಶಸ್ತಿ, ಸಿಂಧನೂರಿನ ಬೆಳಕು ಸಾಂಸ್ಕೃತಿಕ ಟ್ರಸ್ಟ್ ನಿಂದ ರಾಜ್ಯ ಮಟ್ಟದ ಕಾಯಕ ರತ್ನ ಪ್ರಶಸ್ತಿ ಲಭಿಸಿದೆ. ಮಾತ್ರವಲ್ಲ; ಕರ್ನಾಟಕ ಇತಿಹಾಸ ಅಕಾಡೆಮಿ, ವೀರಶೈವ ಅಧ್ಯಯನ ಕೇಂದ್ರ, ಕನ್ನಡ ಸಾಹಿತ್ಯ ಪರಿಷತ್ತು ಹೀಗೆ ವಿವಿಧ ಸಂಸ್ಥೆಗಳಲ್ಲಿ ಹಲವು ಹುದ್ದೆಗಳ ನಿರ್ವಹಣೆ. ಕನ್ನಡ ಅಭಿವೃದ್ಧಿ ಪ್ರಾಧಿಕಾರದ  ಕನ್ನಡ ಆಡಳಿತ ತರಬೇತಿಯ ಜಿಲ್ಲಾ ಸಂಪನ್ಮೂಲ ವ್ಯಕ್ತಿ , ಕರ್ನಾಟಕ ಜಾನಪದ ಅಕಾಡೆಮಿ ‘ಜಾನಪದ ನಿಘಂಟು ಯೋಜನೆ’,  ರಾಯಚೂರು ಜಿಲ್ಲೆಯ ಸಂಗ್ರಹಕಾರ , ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ‘ಗ್ರಾಮ ಚರಿತ್ರೆ ಕೋಶ’ದ  ರಾಯಚೂರು ಜಿಲ್ಲಾ ಸಂಪುಟ ಸಂಪಾದಕರಾಗಿದ್ದಾರೆ.  

ಚನ್ನಬಸವಯ್ಯ ಹಿರೇಮಠ

(08 Jun 1963)

Awards