
ʻಚಂದಿರನಿಲ್ಲದ ಇರುಳುಗಳುʼ (Chandiranillada Irulugalu ) ಎನ್.ಎಸ್. ವಿಶ್ವನಾಥ್ ಅವರ ಮೂಲ ಕೃತಿಯಾಗಿದ್ದು, ರವಿ ಬಳೆ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಇದು ಹದಿನಾರನೆಯ ಶತಮಾನದ ದಕ್ಷಿಣ ಭಾರತದ ಕಾಲ್ಪನಿಕ ಕಥನ. ಸೂಕ್ತ ಸಂತಾನವಿಲ್ಲದ ಕರ್ಣಾಟ ಸಾಮ್ರಾಜ್ಯದ ಉತ್ತರಾಧಿಕಾರದ ದಾಹ, ತಿಣುಕಾಟಗಳಲ್ಲಿ ನಲುಗಿರುವ ನಾಡಿನ ಶಾಂತಿ. ಇಲ್ಲಿ ವಿಜಯನಗರದ ಒಂದು ಹಳ್ಳಿಯಾದ ಮರಾವಳಿತ ಕಥನವಿದೆ. ಅಲ್ಲಿಯ ಭವ್ಯವಾದ ತೋಟದ ಮನೆ ಮಧುವನ. ಸ್ವರ್ಗಕ್ಕೆ ಕಿಚ್ಚು ಹಚ್ಚಬಲ್ಲ ಈ ಸಂಪತ್ತಿನ ಒಡೆಯ ಎಪ್ಪತ್ತು ವಯಸ್ಸಿನ ರಾಜಣ್ಣ ಅಕಾಲ ಮರಣಕ್ಕೆ ತುತ್ತಾಗಿದ್ದಾರೆ. ಕುಲದ ಗರಿಮೆಯನ್ನು ಕಾಪಾಡಲು, ಅವರ ಮುಋು ವಿಧವೆಯರಿಗೆ ಸತಿ ಪರಿಕ್ರಮ ಕೈಗೊಳ್ಳುವಂತೆ ಸದನದ ಹಿರಿಯರು ಆದೇಶಿಸಿದ್ದಾರೆ. ಈ ಸಂದಿಗ್ಧತೆಯಲ್ಲಿ ಮೂರು ಪ್ರಧಾನ ಪಾತ್ರಗಳು ಕವಲು ದಾರಿಯಲ್ಲಿ ಎದುರಾಗುತ್ತವೆ: ಕಿರಿಯ ವಿಧವೆ, ರಾಜಣ್ಣನ ಏಕೈಕ ಪುತ್ರ ಸಂತಾನಕ್ಕೆ ಜನ್ಮವಿತ್ತ ಇನ್ನೂ ಇಪ್ಪತ್ತೆರಡರ ಮನಮೋಹಕ ಆದರ್ಶಿನಿ ಈ ಸತಿಯನ್ನು ಒಲ್ಲಳು. ಚಿಕ್ಕಂದಿನಿಂದ ರಾಜಣ್ಣನನ್ನು ತಂದೆಯಂತೆ ಗೌರವಿಸಿ ಅವರ ಅಂಗರಕ್ಷಕನಾಗಿದ್ದ ಆಜಮ್ ಖಾನ್ ಅವರನ್ನು ಕಳೆದುಕೊಂಡು ಕಂಗಾಲಾಗಿದ್ದಾನೆ. ಮರಾವಳಿಯ ಪ್ರಭಾವಶಾಲಿ ಪುರೋಹಿತ, ಪ್ರಭಾಕರಸ್ವಾಮಿ, ಮೂರನೆಯವರು. ಈತ ಉರುಳಿಸಿದ ಒಂದು ದಾಳದಿಂದ ಭುಗಿಲೆದ್ದ ತಿರುವು-ಮುರುವುಗಳೇ ಈ ಕತೆಯ ಹಂದರ.
©2025 Book Brahma Private Limited.