ಐ.ಎಸ್. ಶಕೀಲ್ ಅವರು ಮೂಲತಃ ಬೀದರ ಜಿಲ್ಲೆಯ ಖೇಣಿ ರಂಜೋಳ ಗ್ರಾಮದವರು. ಹುಟ್ಠೂರಿನಲ್ಲಿ ಪ್ರಾಥಮಿಕ ಶಿಕ್ಷಣ, ಪಕ್ಕದ ಮಂಗಲಗಿಯಲ್ಲಿ ಪ್ರೌಢಶಿಕ್ಷಣ ಹಾಗೂ ಹುಮನಾಬಾದ ಪಟ್ಟಣದಲ್ಲಿ ಪಿ.ಯೂ. ಕಾಲೇಜು ಹಾಗೂ ಪದವಿ ಶಿಕ್ಷಣ ಪೂರ್ಣಗೊಳಿಸಿದರು. ಹುಮನಾಬಾದದ ಸಹಾಯಕ ಪೊಲೀಸ್ ಕಮೀಷನರ್ ಕಚೇರಿಯಲ್ಲಿ ಕಾನ್ ಸ್ಟೇಬಲ್ ಆಗಿರುವ ಶಕೀಲ್, ಸಾಹಿತ್ಯದಲ್ಲೂ ಕೃಷಿ ಮಾಡಿದ್ದಾರೆ.
ಕೃತಿಗಳು: ಅಭಿವೃದ್ಧಿ ಪಥ (ಲೇಖನಗಳ ಸಂಗ್ರಹ), ಹೈ-ಕ ಇತಿಹಾಸ (ಮೌರ್ಯರ ಕಾಲದಿಂದ ಹೈದರಾಬಾದ್ ನಿಜಾಂ ಕಾಲದವರೆಗೆ), ಹುಮನಾಬಾದ್ ತಾಲೂಕು ಇತಿಹಾಸ, ಮೂರು ನಾಟಕಗಳು-ಸಂಗ್ರಹ, ದೇಶ ಮತ್ತು ಪ್ರಗತಿ (ಲೇಖನಗಳ ಸಂಗ್ರಹ) ,ಬೀದರ ಜಿಲ್ಲೆಯ ಸೂಫಿಗಳು, ನಳ-ದಮಯಂತಿ ಕಥೆ ಹೀಗೆ ಕೃತಿಗಳನ್ನು ರಚಿಸಿದ್ದು, ಸ್ಥಳೀಯವಾಗಿ ವಿವಿಧ ಸಂಘಟನೆಗಳು ಇವರನ್ನು ಗೌರವಿಸಿವೆ.