12ನೇ ಶತಮಾನದ ಬಸವಣ್ಣ, ಅಕ್ಕಮಹಾದೇವಿ ಹಾಗೂ ಅನುಭವ ಮಂಟಪದ ಅಧ್ಯಕ್ಷ ಅಲ್ಲಮಪ್ರಭು ಅವರನ್ನು ವಚನಗಳ ಹಿನ್ನೆಲೆಯಲ್ಲಿ ಅವರ ವ್ಯಕ್ತಿತ್ವವದ ಎತ್ತರವನ್ನು ಚಿತ್ರಿಸಿದ ಕೃತಿ-ವಚನ ತ್ರಿಮೂರ್ತಿಗಳು. ಶತಶತಮಾನದಿಂದ ಮೂಢನಂಬಿಕೆಯನ್ನೇ ಬದುಕಿನ ಮಾರ್ಗ ಎಂದು ನಂಬಿದ್ದ ಅಂದಿನ ಕಾಲದ ನಡೆಯನ್ನು ಹೊಸ ದಿಕ್ಕಿನತ್ತ ತಿರುಗಿಸಿ, ಸಾಮಾಜಿಕ ಕ್ರಾಂತಿಗೆ ಕಾರಣರಾದ ಶಿವಶರಣರು, ವಿಶ್ವಕ್ಕೂ ಬದುಕಿನ ಸಾಮರಸ್ಯದ ನೋಟ ನೀಡಿದ ವಚನಕಾರರು ಅದ್ವಿತೀಯರು. ಎಲ್ಲ ಶಿವಶರಣರು ಪ್ರಮುಖರಾದರೂ ಲೇಖಕಿ ಬಸವ, ಅಕ್ಕ ಹಾಗೂ ಅಲ್ಲಮರನ್ನು ಮಾತ್ರ ಆಯ್ದುಕೊಂಡು ಅವರ ವಚನಗಳನ್ನು ವಿಶ್ಲೇಷಿಸಿದ್ದಾರೆ. ಇಲ್ಲಿಯ ಬರಹ ಶೈಲಿಯು, ಒಳನೋಟವು ಓದುಗರ ಗಮನ ಸೆಳೆಯುತ್ತದೆ.
©2024 Book Brahma Private Limited.