ಲೇಖಕ ಡಾ. ನಾಗಪ್ಪ ಟಿ. ಗೋಗಿ ಅವರ ಕೃತಿ- ಬಂಡಾಯ ವಚನಕಾರ ಅಂಬಿಗರ ಚೌಡಯ್ಯ. 12ನೇ ಶತಮಾನದ ವಚನಕಾರರ ಪೈಕಿ ಅಂಬಿಗರ ಚೌಡಯ್ಯನಷ್ಟು ಪುರೋಹಿತಶಾಹಿ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ ಶರಣ ಮತ್ತೊಬ್ಬನಿಲ್ಲ. ನೇರ-ನಿಷ್ಠುರ ವಚನಗಳಿಗೆ ಅಂಬಿಗರ ಚೌಡಯ್ಯನ ವೈಚಾರಿಕ ಸ್ಪಷ್ಟತೆಯೇ ಕನ್ನಡಿ ಹಿಡಿಯುತ್ತದೆ. ಸಾಹಿತಿ ಡಾ. ಬಸವರಾಜ ಸಬರದ ಅವರು ಕೃತಿಗೆ ಬೆನ್ನುಡಿ ಬರೆದು `ಚೌಡಯ್ಯನವರ ವಚನಗಳು ಸಾಮಾನ್ಯ ಜನರಿಗೂ ಅರ್ಥವಾಗುವ ರೀತಿಯಲ್ಲಿ ಇಲ್ಲಿಯ ಬರಹವಿದೆ ಎಂದು ಪ್ರಶಂಸಿಸಿದ್ದರೆ ಸಾಹಿತಿ ಡಾ. ನಾಗಾಬಾಯಿ ಬುಳ್ಳಾ ಅವರು ‘ವಚನ ಚಳವಳಿಯ ಮನೋಧರ್ಮವೇ ಬಂಡಾಯವಾಗಿದೆ. ಅಂಬಿಗರ ಚೌಡಯ್ಯನವರ ವಚನಗಳಲ್ಲಿ ಆವೇಶ, ಆಕ್ರೋಶಗಳನ್ನು ಗುರುತಿಸಬಹುದು’ ಎಂದು ಶ್ಲಾಘಿಸಿದ್ದಾರೆ.
ಲೇಖಕ ಡಾ. ನಾಗಪ್ಪ ಟಿ. ಗೋಗಿ ಅವರು ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಗೋಗಿ ಗ್ರಾಮದವರು. ತಂದೆ ತಿಪ್ಪಣ್ಣ, ತಾಯಿ ಯಂಕಮ್ಮ. ತಂದೆ-ತಾಯಿಯ ಪ್ರೀತಿಯಿಂದ ವಂಚಿತರಾದ ಇವರು ಅಣ್ಣನ ಆಸರೆಯಲ್ಲಿ ಬೆಳೆದರು. ಸೋದರಮಾವನ ನೆರವಿನಿಂದ ಬಾಗಲಕೋಟೆಯಲ್ಲಿ ಪ್ರಾಥಮಿಕ ಶಿಕ್ಷಣ, ನಂತರ ಗೋಗಿಯಲ್ಲಿ ಪ್ರೌಢಶಿಕ್ಷಣದಿಂದ ಪದವಿ ಶಿಕ್ಷಣ ಪೂರೈಸಿದರು. ಗುಲಬರ್ಗಾ ವಿವಿಯಿಂದ ಎಂ.ಎ. ಶಿಕ್ಷಣ ಪಡೆದರು. ಲಿಂಗಣ್ಣ ಸತ್ಯಂಪೇಟೆ ಜೀವನ ಕುರಿತು ಎಂ.ಫಿಲ್ ಹಾಗೂ ಅಂಬಿಗರ ಚೌಡಯ್ಯ ಜೀವನ ಹಾಗೂ ವಚನ ಸಾಹಿತ್ಯ ಕುರಿತು ಪಿಎಚ್ ಡಿ ಪೂರೈಸಿದರು. ಸುರಪುರ ತಾಲೂಕಿನ ಕೆಂಭಾವಿ ಹಾಗೂ ಬೀದರ ಜಿಲ್ಲೆಯ ಹುಮನಾಬಾದ ಸರ್ಕಾರಿ ಪ್ರಥಮ ದರ್ಜೆ ...
READ MORE