ಖ್ಯಾತ ಲೇಖಕ ಪ್ರೊ.ಓ.ಎಲ್. ನಾಗಭೂಷಣಸ್ವಾಮಿ ಅವರ ‘ವಚನ ಪ್ರಶ್ನೋತ್ತರ’ ಕೃತಿಯು ಓದುಗರ, ವಚನ ಸಂಬಂಧಿ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡುತ್ತದೆ. ಇತ್ತಿಚಿನ ದಿನಗಳಲ್ಲಿ ಲಭ್ಯವಿರುವ ಸುಮಾರು ಇಪ್ಪತ್ತು ಸಾವಿರ ವಚನಗಳಲ್ಲಿ ಹೆಚ್ಚೆಂದರೆ ಎರಡು ಮೂರು ನೂರು ವಚನಗಳು ಮತ್ತೆ ಮತ್ತೆ ಕಣ್ಣಿಗೆ, ಕಿವಿಗೆ ಬೀಳುತ್ತವೆ. ವಚನಗಳನ್ನು ಕುರಿತ ಬರವಣಿಗೆಯೂ ಕೆಲವು ಸಂಗತಿಗಳನ್ನು ಹಿಡಿದಿಟ್ಟುಕೊಂಡು ಸುಮಾರು ಐವತ್ತು ವರ್ಷಗಳಿಂದ ಕಿಂಚಿತ್ತೂ ಬೇಸರವಿಲ್ಲದೆ ಪುನರಾವರ್ತನೆ ಮಾಡುತ್ತ ಬಂದಿವೆ. ವಚನಗಳ ಬಗ್ಗೆ ಇನ್ನು ಶೋಧಿಸಬೇಕಾದದ್ದು ಏನೂ ಇಲ್ಲ ಅನ್ನುವಂತಿಲ್ಲ. ಇಂಥ ಹೊತ್ತಿನಲ್ಲಿ ’ವಚನ ಪ್ರಶ್ನೋತ್ತರ’ ಎನ್ನುವ ಕಿರು ಹೊತ್ತಗೆಯ ಮೂಲಕ ಶೋಧದ ಇನ್ನೊಂದು ದಾರಿ ಆಸಕ್ತರಿಗೆ ಕಂಡೀತು ಅನ್ನುವ ಒಲವು ಈ ಪುಸ್ತಕದಲ್ಲಿದೆ.
©2025 Book Brahma Private Limited.