ಸಿ.ಕೆ. ನಾವಲಗಿ ಅವರು ಸಂಪಾದಿಸಿರುವ ಕೃತಿ ಶರಣ ಸಂಪದ. ಈ ಕೃತಿಯಲ್ಲಿ ಮುಖ್ಯವಾಗಿ ಬಸವಣ್ಣನವರು ಮತ್ತು ಲಿಂಗಾಯತ ಧರ್ಮ, ಶಿವಶರಣರ ಬದುಕು ಹಾಗೂ ಸಂವೇದನೆ, ಕಲ್ಯಾಣ ದರ್ಶನ, ಅಕ್ಕಮಹಾದೇವಿ: ಶ್ರೇಷ್ಠ ಸಬಲ ಮಹಿಳೆ, ಸಂಗೀತ ಮತ್ತು ವಚನಗಳು, ಶರಣೆ ಮುಕ್ತಾಯಕ್ಕನ ಒಲವು-ನಿಲುವು, ವಚನ ಸಾಹಿತ್ಯದಲ್ಲಿ ಕಾಯಕ ಪ್ರಜ್ಞೆ, ಅಗ್ಘವಣೀ ಹೊನ್ನಯ್ಯ: ಒಂದು ಪರಿಚಯ, ಅಕ್ಕಮಹಾದೇವ ವಚನಗಳಲ್ಲಿ ದೇಸೀ ಸಂವೇದನೆ, ವೈರಾಗ್ಯನಿಧಿ ಅಕ್ಕಮಹಾದೇವಿ, ಕರ್ಮಯೋಗಿ ಸಿದ್ಧರಾಮ ಶಿವಯೋಗಿ, ಡಾ. ಸ.ಜ ನಾಗಲೋಟಿಮಠ, ವ್ಯೋಮಮೂರುತಿ ಅಲ್ಲಮಪ್ಭುದೇವರು, ವಚನಗಳಲ್ಲಿ ಅರಿವು, ಅವಿರಳ ಜ್ಞಾನಿ ಚನ್ನ ಬಸವಣ್ಣ, ಬಸವಣ್ಣನವರ ದೃಷ್ಟಿಯಲ್ಲಿ ಸಮಾಜ, ಬಸವೇಶ್ವರರು ಮತ್ತು ಸಾಮಾಜಿಕ ಚಿಂತನೆ ಮುಂತಾದ ಲೇಖನಗಳಿವೆ.
ಡಾ. ಸಿ.ಕೆ. ನಾವಲಗಿ ಎಂತಲೇ ಪರಿಚಿತರಾಗಿರುವ ಲೇಖಕ ಚೆನ್ನಬಸಪ್ಪ ಕಲ್ಲಪ್ಪ ನಾವಲಗಿ ಅವರು 1956 ಆಗಸ್ಟ್ 1ರಂದು ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲ್ಲೂಕಿನ ಬಸರಕೋಡ ಗ್ರಾಮದಲ್ಲಿ ಜನಿಸಿದರು. ಕನ್ನಡ ಜಾನಪದ ಸಾಹಿತ್ಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಇವರು ಕನ್ನಡ ಅಧ್ಯಾಪಕರಾಗಿ ವೃತ್ತಿ ಆರಂಭಿಸಿ, ಪಾಚಾರ್ಯರಾಗಿ ನಿವೃತ್ತಿ ಹೊಂದಿದ್ದಾರೆ. ಇವರು ರಚಿಸಿದ ಪ್ರಮುಖ ಕೃತಿಗಳೆಂದರೆ ಜಾನಪದ ಸ್ಪಂದನ, ಬೇಂದ್ರೆಯವರ ಕಾವ್ಯದ ಮೇಲೆ ಜಾನಪದ ಪ್ರಭಾವ, ಗಾದೆಗಳಲ್ಲಿ ಹಾಸ್ಯ, ಶರಣ ವಿಚಾರವಾಹಿನಿ, ವಚನ ಸಾಹಿತ್ಯ ಮತ್ತು ಜಾನಪದ, ದಿಕ್ಸೂಚಿ, ವಚನ ಸಾಹಿತ್ಯದಲ್ಲಿ ಜಾನಪದ ಅಂಶಗಳು, ಗ್ರಾಮೀಣ ಗ್ರಹಿಕೆ, ಕಥನ ಕವನ ಸಂಚಯ, ...
READ MORE