ಪ್ರೊ. ಎಸ್.ಜಿ. ಸಿದ್ದರಾಮಯ್ಯನವರು ವಚನ ಮತ್ತು ಆಧುನಿಕ ಸಾಹಿತ್ಯಗಳತ್ತ ಹರಿಸಿದ ಚಿಂತನೆಗಳ ಫಲ ’ವಚನ ಸಂಸ್ಕೃತಿ - ಸಾಹಿತ್ಯ ಸಂಗತಿ’ ಕೃತಿ. ವಚನಕಾರರಲ್ಲೇ ನಿರ್ಲಕ್ಷಿತ ಸಮುದಾಯಕ್ಕೆ ಸೇರಿದವರನ್ನು ಸಿದ್ಧರಾಮಯ್ಯ ಮುಖ್ಯವಾಗಿ ಧ್ಯಾನಿಸಿದ್ದಾರೆ. ಕೃತಿಯ ಮೊದಲ ಭಾಗ ಅಕ್ಕಮ್ಮ, ಲಕ್ಕಮ್ಮ, ನಗೆಯ ಕಾಯಕದ ಮಾರಿತಂದೆ ಮುಂತಾದವರ ಬಗೆಗೆ ಚರ್ಚಿಸಲಾಗಿದೆ. ಅಕಾಡೆಮಿಕ್ ವಲಯ ನಿರ್ಲಕ್ಷಿಸುತ್ತಿರುವುದಕ್ಕೇ ಒತ್ತು ನೀಡಿರುವುದರಿಂದ ಕೃತಿ ಮುಖ್ಯವಾದುದು ಎನಿಸುತ್ತದೆ.
ಎರಡನೇ ಭಾಗದಲ್ಲಿ ಆಧುನಿಕ ಕನ್ನಡದ ವಿವಿಧ ಲೇಖಕರ ಬಗೆಗೆ ಬರೆದ ಲೇಖನಗಳಿವೆ. ಕವಿಗಳಾದ ಸನದಿ, ಎಲ್.ಎನ್. ಮುಕುಂದರಾಜ್ ಹಾಗೂ ಕತೆಗಾರ ಎಸ್.ಎಫ್. ಯೋಗಪ್ಪನವರ್ ಮುಂತಾದವರ ಕೃತಿಗಳನ್ನು ವಿಶ್ಲೇಷಿಸಿದ್ದಾರೆ.
©2025 Book Brahma Private Limited.