‘ಉಮೇಶ ಪ್ರಿಯ ಶಿವಮೂರ್ತಿ ಪ್ರಭು’ ಎಂಬ ಅಂಕಿತನಾಮದೊಂದಿಗೆ ವಚನಗಳನ್ನು ಬರೆಯುತ್ತಿರುವ ಲೇಖಕ ಟಿ.ಪಿ. ಉಮೇಶ ಅವರ ಕೃತಿ-ವಚನಾಂಜಲಿ. ವಾಸ್ತವಿಕ ವಿದ್ಯಮಾನಗಳ ಹಿನ್ನೆಲೆಯಲ್ಲಿ ವ್ಯಕ್ತಿಗತ ಹಾಗೂ ಸಾಮಾಜಿಕ ಹೊಣೆಗಾರಿಕೆಯನ್ನು ಮೂಲ ದ್ರವ್ಯವಾಗಿಸಿಕೊಂಡ ವಚನಗಳು, ಅಂತಿಮವಾಗಿ ಸದಾಶಯಗಳನ್ನು ಹೊಂದಿವೆ. ಕಂಗೆಟ್ಟ ಮನಸುಗಳಿಗೆ ಸಲಹೆ-ಸೂಚನೆಗಳನ್ನು ನೀಡುತ್ತವೆ. ಘಟನೆ-ಸನ್ನಿವೇಶ ಹಾಗೂ ಸ್ಥಿತಿಗತಿಗಳಿಗೆ ಇರುವ ಕಾರಣ ಹಾಗೂ ಪರಿಣಾಮಗಳನ್ನು ವಿಶ್ಲೇಷಿಸುತ್ತವೆ. ಮಾತ್ರವಲ್ಲ; ಪರಿಹಾರವನ್ನೂ ಸೂಚಿಸಿ, ಬದುಕಿನ ಸಾರ್ಥಕತೆಗಾಗಿ ಸಾಗಬೇಕಾದ ನಿರ್ದಿಷ್ಟ ಮಾರ್ಗವನ್ನು ನಿರ್ದೇಶಿಸುತ್ತವೆ. ಸಮಸ್ಯೆ-ಗೊಂದಲಗಳಿಗೆ 12ನೇ ಶತಮಾನದ ಶರಣರ ಅಧ್ಯಾತ್ಮಿಕತೆಯಲ್ಲಿ ಪರಿಹಾರವಿದೆ, ಅರಿವಿನಲ್ಲಿ ನೆಮ್ಮದಿ ಇದೆ ಎಂಬ ಭಾವ ಪ್ರಾಧಾನ್ಯತೆಯು ಇಲ್ಲಿಯ ವಚನಗಳ ಕೇಂದ್ರವಾಗಿದೆ.
©2024 Book Brahma Private Limited.