ಆದಯ್ಯನ ವಚನಗಳು-ಫ.ಗು. ಹಳಕಟ್ಟಿ ಅವರ ವಚನಗಳ ಸಂಪಾದಿತ ಕೃತಿ. ಪುರಾತನ ಶಿವಶರಣರಲ್ಲಿ ಆದಯ್ಯ ಎಂಬ ಶರಣನು ಪ್ರಮುಖ. ಆತನ ವಚನಗಳು ಚದುರಿದಂತೆ ಅಲ್ಲಿ ಇಲ್ಲಿ ಕೆಲ ಕೃತಿಗಳಲ್ಲಿ ಕಾಣ ಸಿಗುತ್ತವೆ. ಆದರೆ, ಆತನ ಬಹುಸಂಖ್ಯೆಯ ವಚನಗಳು ಒಂದೆಡೆ ಸಿಗುವುದೇ ಈ ಕೃತಿಯ ವೈಶಿಷ್ಟ್ಯ. ಈತನ ಮೂಲ ಗುಜರಾತ ರಾಜ್ಯದ ದ್ವಾರಕಾನಗರ. ತಂದೆ ಘೋರದತ್ತ, ತಾಯಿ ಪುಣ್ಯವತಿ. ವ್ಯಾಪಾರ ನಿಮಿತ್ತವಾಗಿ ಕರ್ನಾಟಕದ ಈಗಿನ ಗದಗ ಬಳಿಯ ಲಕ್ಷ್ಮೇಶ್ವರಕ್ಕೆ ಬರುತ್ತಾನೆ. ಇಲ್ಲಿ ಚಂದ್ರಾದಿತ್ಯ ಎಂಬ ಅರಸ ಆಳುತ್ತಿದ್ದ. ನಗರ ಸಂಚಾರಕ್ಕೆ ಹೊರಟಿದ್ದಾಗ ಪಾರಿಸಶೆಟ್ಟಿ ಎಂಬ ಜೈನ ವರ್ತಕನ ಪುತ್ರಿ ಪದ್ಮಾವತಿಯು ಕಣ್ಣಿಗೆ ಬಿದ್ದು, ಅವಳಲ್ಲಿ ಈತ ಮೋಹಿತನಾಗುತ್ತಾನೆ. ಪದ್ಮಾವತಿಯೂ ಶೈವ ದೀಕ್ಷೆ ಅನುಸಾರ ಮದುವೆಯಾಗುತ್ತಾಳೆ. ಈಕೆ ಒಬ್ಬಳೇ ಮಗಳಾದ್ದರಿಂದ ಆದಯ್ಯನೂ ಇಲ್ಲಿಯೇ ಉಳಿಯಬೇಕಾಯಿತು. ನಂತರ ಶಿವಶರಣರ ಪರಿಚಯವಾಗಿ ವಚನ ಚಳವಳಿಯ ಭಾಗವಾಗುತ್ತಾನೆ. ಹೀಗೆ ಆತನ ಜೀವನ ವೃತ್ತಾಂತದೊಂದಿಗೆ ಆತನ ವಚನಗಳ ಸಾರವನ್ನು ವಿಶ್ಲೇಷಿಸಲಾಗಿದೆ. ಸೌರಾಷ್ಟ್ರ ಸೋಮೇಶ್ವರ ಎಂಬುದು ಆದಯ್ಯನ ವಚನಾಂಕಿತ.
©2024 Book Brahma Private Limited.