ಸಂ.ಶಿ.ಭೂಸನೂರಮಠ ಹಾಗೂ ರೆ. ಉತ್ತಂಗಿ ಚೆನ್ನಪ್ಪನವರು ಸಂಪಾದಿಸಿದ ಕೃತಿ-ಮೋಳಿಗೆ ಮಾರಯ್ಯ ಹಾಗೂ ರಾಣಿ ಮಹಾದೇವಿಯವರ ವಚನಗಳು. ವಚನ ಸಾಹಿತ್ಯದ ವಿಸ್ತಾರ ಅಗಾಧ-ಅಪಾರ. ಪ್ರತಿಯೊಬ್ಬ ಶರಣನೂ ಸಹ ಒಂದೊಂದು ಜ್ಞಾನದ ಆಳ ಕಡಲು. ಬೌದ್ಧಿಕ ಎತ್ತರಕ್ಕೆ ಆಕಾಶವೇ ಮಿತಿ. ಅವರ ವಚನಗಳು ಅನಂತ...ಶಾಶ್ವತ. ಎಲ್ಲ ಕಾಲ-ದೇಶಕ್ಕೂ ಅನ್ವಯಿಸುವಂತಹದ್ದು. ಮೋಳಿಗೆ ಮಾರಯ್ಯ ಹಾಗೂ ರಾಣಿ ಮಹಾದೇವಿಯ ಯವರ ವಚನಗಳನ್ನು ಸಂಶೋಧಿಸಿ ಸಂಪಾದಿಸಲಾಗಿದೆ. ಇಲ್ಲಿಯ ವಚನಗಳ ಶೈಲಿ, ಶಬ್ದ, ವ್ಯಾಕರಣ, ವಿಚಾರಗಳನ್ನೂ ಸಹ ವಿಶ್ಲೇಷಿಸಲಾಗಿದೆ. ಮೋಳಿಗೆ ಮಾರಯ್ಯನ ವಚನಗಳನ್ನು ಈಶ್ವರ-ಜೀವ-ವಿಶ್ವ, ಷಟಸ್ಥಲಗಳು, ಸಂಪೂರ್ಣ ಷಟಸ್ಥಲ, ಅಷ್ಟಾವರಣ, ಅವಿದ್ಯೆ, ವಾಗದ್ವೈತ, ಬೆಡಗಿನ ವಚನಗಳು ಹೀಗೆ ವಿಭಾಗಿಸಿ ವಿಶ್ಲೇಷಿಸಲಾಗಿದೆ. ಅದೇ ರೀತಿ ರಾಣಿ ಮಹಾದೇವಿಯವರ ವಚನಗಳನ್ನು ಸಹ ವರ್ಗೀಕರಿಸಲಾಗಿದೆ. ವಚನ ಸಾಹಿತ್ಯ ಸಂಪಾದಿತ ಕೆಲಸದಲ್ಲಿ ಈ ಕೃತಿಯು ಉತ್ತಮ ಆಕರ ಗ್ರಂಥವಾಗಿ ಗಮನ ಸೆಳೆಯುತ್ತದೆ.
©2024 Book Brahma Private Limited.