‘ಲಿಂಗಹುಟ್ಟಿತ್ತು ಬಸವಣ್ಣನಿಂದ’ ಕೃತಿಯು ಜಯಶ್ರೀ ಸಿಂಧೂರ ಅವರ ಲೇಖನಗಳ ಸಂಕಲನವಾಗಿದೆ. ಈ ಕೃತಿಯಲ್ಲಿನ ಕೆಲವೊಂದು ವಿಚಾರಗಳು ಹೀಗಿವೆ; ಬಸವಣ್ಣನವರು 12ನೆಯ ಶತಮಾನದಲ್ಲಿ ಮಾಡಿದ ಸಮಾಜೋ-ಧಾರ್ಮಿಕ ಕ್ರಾಂತಿಯ ಫಲವಾಗಿ ಲಿಂಗಾಯತ ಎಂಬ ಹೊಸಧರ್ಮದ ಉದಯವಾಯಿತು. ಈ ಧರ್ಮದ ಆಚಾರಸಂಹಿತೆ ಕಾರಣವಾಗಿ ಇಷ್ಟಲಿಂಗವನ್ನು ಧರಿಸುವ ಮೂಲಕ ಸಮಾನತೆಯ ತತ್ವಕ್ಕೆ ಹೊಸ ವ್ಯಾಖ್ಯಾನ ಬರೆದರು. ಪ್ರಾಚೀನ ಶೈವಪರಂಪರೆಯ ಕಾಲದಿಂದಲೂ ಸ್ಥಾವರಲಿಂಗದ ಆರಾಧನೆ ಪ್ರಾರಂಭವಾದುದು ಬಸವಾದಿ ಶರಣರ ಕಾಲದಲ್ಲಿ. ಅಂತೆಯೇ, ಇಷ್ಟಲಿಂಗವು ಬಸವಣ್ಣನವರಿಂದಲೇ ಅಸ್ತಿತ್ವಕ್ಕೆ ಬಂದಿತ್ತೆಂಬ ಹೊಸ ವಿಚರಧಾರೆಯನ್ನು ಲೇಖಕಿ ಜಯಶ್ರೀ ಸಿಂಧೂರ ಅವರು ಅತ್ಯಂತ ಸಬಲ ಆಧಾರಗಳಿಂದ ಇಲ್ಲಿ ಚಿತ್ರಿಸಿದ್ದಾರೆ’ ಎಂದಿದೆ.
©2025 Book Brahma Private Limited.