ಖ್ಯಾತ ಲೇಖಕಿ ಡಾ. ಶರಣಮ್ಮ ಬಿ. ಪಾಟೀಲ ಅವರ ಕೃತಿ-ಶೂನ್ಯ ಸಂಪಾದನೆಗಳಲ್ಲಿ ಶಿವಶರಣೆಯರು. 12ನೇ ಶತಮಾನದ ಶಿವಶರಣೆಯರ ಅಧ್ಯಾತ್ಮಿಕ ಸಾಧನೆ, ಸಾಂಸಾರಿಕ ದೃಷ್ಟಿಕೋನ, ಮನುಷ್ಯ ಜನ್ಮದ ಸಾರ್ಥಕತೆ ಕುರಿತಂತೆ ಅವರ ವಚನಗಳ ವ್ಯಾಖ್ಯಾನ ಒಳಗೊಂಡ ಕೃತಿ ಇದು. ವಚನಗಳ ಅಭ್ಯಾಸಿಗಳಿಗೆ ಈ ಕೃತಿ ಉಪಯುಕ್ತ.
ಲೇಖಕಿ ಡಾ. ಶರಣಮ್ಮ ಪಾಟೀಲ ಅವರು ಮೂಲತಃ ಕಲಬುರಗಿಯವರು. ತಂದೆ ಬಸವಂತರಾವ್ ಗೌಡ .ತಾಯಿ ಸುಭದ್ರಬಾಯಿ. ಬಾಲ್ಯದಲ್ಲೇ ತಂದೆಯನ್ನು ಕಳೆದುಕೊಂಡ ಲೇಖಕಿ ತಾಯಿಯ ತವರೂರು ಚಿತ್ತಾಪುರ ತಾಲೂಕಿನ ಕುಂದಗೂಳ ಹಾಗೂ ರಟಗಲ್ ಗ್ರಾಮದಲ್ಲಿ ಪ್ರಾಥಮಿಕ ಶಿಕ್ಷಣ , ಸೇಡಂ ನಲ್ಲಿ ಪ್ರೌಢಶಿಕ್ಷಣ, ಕಲಬುರಗಿಯಲ್ಲಿ ಹತ್ತನೇ ತರಗತಿ ಶಿಕ್ಷಣ, ಪೂರೈಸಿದರು. ಶರಣಬಸವೇಶ್ವರ ಸಂಸ್ಥಾನದ ಶ್ರೀ ಮಾತೋಶ್ರೀ ಗೋದುತಾಯಿ ದೊಡ್ಡಪ್ಪ ಅಪ್ಪ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಪಿಯುಸಿ, ಪದವಿ ಶಿಕ್ಷಣ, ಮುಂದೆ ಗುಲಬರ್ಗಾ ವಿ.ವಿ.ಯಿಂದ ಕನ್ನಡ ವಿಭಾಗದಲ್ಲಿ ಎಂ.ಎ.ಪದವಿ ಪಡೆದರು. ‘ಶೂನ್ಯ ಸಂಪಾದನೆಗಳಲ್ಲಿ ಸ್ತ್ರೀ ಪ್ರಸಂಗಗಳು’ ವಿಷಯವಾಗಿ ಎಂ.ಫಿಲ್ ಹಾಗೂ "ಶೂನ್ಯ ಸಂಪಾದನೆ ಹಾಗೂ ವೀರಶೈವ ...
READ MORE