ಬಸವಣ್ಣನವರು ಬೋಧಿಸಿದ ಸಿದ್ಧಾಂತ ಮತ್ತು ತತ್ವಗಳು-ಕೃತಿಯನ್ನು ಪಂಡಿತ ಚನ್ನಪ್ಪ ಎರೀಸೀಮೆ ರಚಿಸಿದ್ದಾರೆ. ‘ಸಮತೆ, ವಿಶ್ವಬಾಂಧವ್ಯ, ವ್ಯಕ್ತಿ ಸ್ವಾತಂತ್ಯ್ರ, ಸತ್ಯ, ಅಹಿಂಸೆ, ದಯಾಪರತೆ ಮೊದಲಾದ ತತ್ವಗಳ ತಳಹದಿಯ ಮೇಲೆ ಆದರ್ಶ ಸಮಾಜವೊಂದನ್ನು ರೂಪಿಸುವ ಯುಗ ಪ್ರವರ್ತಕ ಬಸವಣ್ಣನವರ ಜೀವನ ಆದರ್ಶಪ್ರಾಯ. ಅವರ ಸಿದ್ಧಾಂತದಲ್ಲಿ ನೂತನ ದೃಷ್ಟಿ ಇದೆ. ಹಳೆಯದೆಲ್ಲವೂ ಉತ್ತಮ ಎಂಬ ಕುರುಡು ದೃಷ್ಟಿ ಇಲ್ಲ. ನಾನು ಬರೆದಿದುದೇ ಸರಿ ಎಂಬ ಆಗ್ರಹವಿಲ್ಲ. ಇದು ನನ್ನ ದೃಷ್ಟಿ’ ಎಂದು ಲೇಖಕರು ಕೃತಿಗೆ ಬರೆದ ತಮ್ಮ ಮಾತುಗಳಲ್ಲಿ ಸ್ಪಷ್ಟಪಡಿಸಿದ್ದಾರೆ. ಮಾತ್ರವಲ್ಲ; ಪುರಾಣದ ಚೌಕಟ್ಟಿನಲ್ಲಿರುವ ಬಸವಣ್ಣನವರನ್ನಷ್ಟೇ ನೋಡಿದರೆ ಅವರ ಪೂರ್ಣ ವ್ಯಕ್ತಿತ್ವ ಅರಿವಾಗದು. ಆದ್ದರಿಂದ, ಬಸವಣ್ಣನವರ ಬೋಧೆ ಹಾಗೂ ಸಿದ್ಧಾಂತಗಳ ಹಿನ್ನೆಲೆಯಲ್ಲಿ ತಮಗೆ ತಿಳಿದ ಮಟ್ಟಿಗೆ ವಿಚಾರ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ.
ಬಸವಣ್ಣನವರು ಬೋಧಿಸಿದ ಸಿದ್ಧಾಂತ ಮತ್ತು ತತ್ವಗಳು, ಬಸವಣ್ಣನವರು ಬೋಧಿಸಿದ ಸಿದ್ಧಾಂತವು ಆಗಮೋಕ್ತವಲ್ಲವೆ?, ಅವರ ಬೋಧೆಯ ಮುಖ್ಯಾಂಶಗಳು, ಬಸವಣ್ಣನವರ ತತ್ವಗಳು, ಬಸವ ಬೋಧೆ ಮುಖ್ಯೋದ್ದೇಶ, ಧಾರ್ಮಿಕಾಚರಣೆಯ ಮುಖ್ಯ ಬೋಧೆಗಳು ಹಾಗೂ ರಾಜಕೀಯ ರಂಗದಲ್ಲಿ ಬಸವಣ್ಣನವರ ಬೋಧೆ -ಹೀಗೆ ಒಟ್ಟು ಏಳು ಶೀರ್ಷಿಕೆಯಡಿ ಲೇಖಕರು ತಮ್ಮ ವಿಚಾರಗಳನ್ನು ಕೃತಿಯಲ್ಲಿ ಸ್ಪಷ್ಟಪಡಿಸಿದ್ದಾರೆ.
©2024 Book Brahma Private Limited.