ಖ್ಯಾತ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜ ಅವರ ಕೃತಿ-ವಚನ ವಿನ್ಯಾಸ. ವಚನಗಳು ಸಾಹಿತ್ಯವೇ ಅಲ್ಲ ಎಂಬ ಪೂರ್ವಗ್ರಹ ಪೀಡಿತ ಮನಸುಗಳಿಗೆ ಈ ಕೃತಿಯು ನೇರ ಉತ್ತರ ನೀಡುತ್ತದೆ. ವಚನಗಳಲ್ಲಿಯ ಸಾಹಿತ್ಯಕ ಅಂಶಗಳನ್ನು ತೆರೆದು ತೋರಿಸಿದೆ ಇಲ್ಲಿಯ ಬರೆಹಗಳೂ. ಧಾರ್ಮಿಕ, ಸಾಹಿತ್ಯಕ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿಯೂ ಮುಖ್ಯ ಎಂಬ ಅಂಶ ಕಾಣಬಹುದು. ವಚನಗಳ ರಚನೆ ಕುರಿತ ವಿಶ್ಲೇಷಣೆಯೂ ಸಮರ್ಥವಾಗಿ ಮೂಡಿಬಂದಿದೆ. ಕನ್ನಡ ಕಾವ್ಯಾಭ್ಯಾಸಕ್ಕೆ ಹೊಸ ಆಯಾಮಗಳನ್ನು ನೀಡಿದೆ. ಸಾಹಿತ್ಯದ ವಿದ್ಯಾರ್ಥಿ ಹಾಗೂ ವಿಮರ್ಶೆ ಲೋಕಕ್ಕೆ ಈ ಕೃತಿಯು ಉತ್ತಮ ಆಕರ ಗ್ರಂಥವಾಗಿದೆ.
©2024 Book Brahma Private Limited.