ಲೇಖಕ ಡಾ. ರಾಮಚಂದ್ರ ಗಣಾಪುರ ಅವರು ಸಂಪಾದಿಸಿರುವ ಕೃತಿ- ಕಲ್ಯಾಣ ಕಿರಣಗಳು. ಒಟ್ಟು 31 ಲೇಖನಗಳಿದ್ದು,ಬಸವಾದಿ ಶರಣರಾದ ಶಿವಶರಣ ಹರಳಯ್ಯ, ಕಲ್ಯಾಣಮ್ಮ,ಹೂಗಾರ ಮಾದಯ್ಯ,ಮುಂತಾದವರ ಕುರಿತು ಲೇಖನಗಳಿವೆ. ತಮ್ಮ ತಾಲೂಕಿನ ರಂಗಕರ್ಮಿ ಕೊಡ್ಲಿ ಕಂಟೆಪ್ಪಾ ಮಾಸ್ಟರ, ಪಂಚಾಕ್ಷರಿ ಪುಣ್ಯಶೆಟ್ಟಿ, ಎಸ್.ಎನ್. ದಂಡಿನಕುಮಾರ ಅವರನ್ಮಾನು ಪರಿಚಯಿಸಿದ್ದಾರೆ. ಭಾವೈಕ್ಯತೆ ತಾಣ, ವಾಣಿಜ್ಯ ನಗರಿ ಎಂದೇ ಪ್ರಸಿದ್ಧಿ ಪಡೆದ ಆರಾಧ್ಯದೈವ ವೀರಭದ್ರೇಶ್ವರ ಕುರಿತ ಸಮಗ್ರ ಮಾಹಿತಿಯನ್ನು ಕಟ್ಟಿಕೊಟ್ಟಿದ್ದಾರೆ. ಹರಿದಾಸರು, ಪವಾಡಪುರುಷರು,ಸ್ವರ ವಚನಕಾರರು, ಕನ್ನಡದ ಕಣ್ಮಣಿಗಳು, ಸಂಸ್ಕೃತಿ ಚಿಂತಕರು, ರಂಗಭೂಮಿಯ ದಿಗ್ಗಜರು, ಆಧುನಿಕ ವಚನಕಾರರ ಕುರಿತು ಕಿರು ಪರಿಚಯವುಳ್ಳ ಕೃತಿ ಇದು.
©2024 Book Brahma Private Limited.