ಅಲ್ಲಮನ ವಚನಗಳು

Author : ಪಿ. ವಿ. ನಾರಾಯಣ

Pages 168

₹ 150.00




Year of Publication: 2018
Published by: ಅಂಕಿತ ಪುಸ್ತಕ
Address: 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್, ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು - 560 004
Phone: 26617100, 26617755

Synopsys

ಹನ್ನೆರಡನೆಯ ಶತಮಾನದ ವಚನ ಚಳವಳಿ ಒಂದು ವಿಸ್ಮಯ. ಜನಸಮುದಾಯಗಳೇ ಹೊಸ ವ್ಯವಸ್ಥೆ ರೂಪಿಸಿಕೊಳ್ಳಲು ಪ್ರಯತ್ನಿಸಿದರು. ಕೆಳಸಮುದಾಯಗಳ ಜನರು ತಮಗೂ ಹೇಳುವುದಕ್ಕಿದೆ ಎಂಬಂತೆ ಒಟ್ಟಿಗೆ ಕೂಗಲು ಆರಂಭಿಸಿದರು. ಹಿಂದೆ ನಾಯಕನನ್ನು ಅನುಸರಿಸಿ ಕೆಲವು ಆಂದೋಲನಗಳು ನಡೆದಿವೆ. ವಚನ ಚಳವಳಿಯು ಕೇವಲ ಒಬ್ಬನ ಮುಂದಾಳತ್ವದಲ್ಲಿ ನಡೆಯದೆ ಸಾಮೂಹಿಕ ನಾಯಕತ್ವದಲ್ಲಿ ಜರುಗಿತು. ತಾವು ಕಟ್ಟಬಯಸಿದ ಸಮಾಜದ ಧಾರ್ಮಿಕ ಸಾಮಾಜಿಕ ಸ್ವರೂಪದ ಕುರಿತು ಹಾಗೂ ತಮ್ಮ ಮನದಾಳದಲ್ಲಿ ಇದುವರೆವಿಗೂ ಬಯ್ತಿಟ್ಟುಕೊಂಡಿದ್ದ ಎಲ್ಲ ಸ್ತರಗಳ ಆಶೋತ್ತರಗಳನ್ನು ಕೆಳವರ್ಗದ ನೂರಾರು ಜನರು ತಮ್ಮತಮ್ಮಲ್ಲಿಯೇ ಚರ್ಚಿಸಿದ್ದು ವಚನಗಳ ಮೂಲಕ, ಜನನುಡಿಯಾದ ಕನ್ನಡದ ಅಪೂರ್ವ ತೇಜಸ್ಸು ಆ ಕಾಲದ ಇನ್ನೂರಕ್ಕೂ ಹೆಚ್ಚು ಸಂಖ್ಯೆಯ ವಚನಕಾರರ ಮಾತುಗಳ ಮೂಲಕ ಎಲ್ಲೆಡೆ ಹೊಮ್ಮಿ ಪಸರಿಸಿತು.

ವಚನ ಚಳುವಳಿಯ ಮುಂಚೂಣಿಯಲ್ಲಿದ್ದ ಅಲ್ಲಮ ಪ್ರಭುವಿನ ವಚನಗಳನ್ನು ಹಿರಿಯ ವಿದ್ವಾಂಸ ಪಿ.ವಿ. ನಾರಾಯಣ ಅವರು ಆಯ್ಕೆ ಮಾಡಿ, ಅದಕ್ಕೆ ಟಿಪ್ಪಣಿಗಳನ್ನು ಬರೆದಿದ್ದಾರೆ.

About the Author

ಪಿ. ವಿ. ನಾರಾಯಣ
(18 December 1942)

ಡಾ. ಪಿ. ವಿ. ನಾರಾಯಣ, ಬೆಂಗಳೂರಿನ ವಿಜಯಾ ಕಾಲೇಜಿನಲ್ಲಿ ಕನ್ನಡ ಪ್ರವಾಚಕರಾಗಿದ್ದರು. ತಂದೆ ಪಿ.ವೆಂಕಪ್ಪಯ್ಯ, ತಾಯಿ ನರಸಮ್ಮ. ಬೆಂಗಳೂರಿನಲ್ಲಿ 1942ರ ಡಿ.18 ರಂದು ಹುಟ್ಟಿದರು.  ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ. (ಕನ್ನಡ) ಕರ್ನಾಟಕ ವಿಶ್ವವಿದ್ಯಾಲಯದಿಂದ ಎಂ.ಎ. (ಇಂಗ್ಲಿಷ್), “ವಚನ ಸಾಹಿತ್ಯ: ಒಂದು ಸಾಂಸ್ಕೃತಿಕ ಅಧ್ಯಯನ” ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ. ಪಡೆದಿದ್ದಾರೆ.. ವಿಮರ್ಶೆ/ಸಂಶೋಧನೆ-ಬಳ್ಳಿಗಾವೆ, ಕಾಯತತ್ತ್ವ, ಚಂಪೂಕವಿಗಳು, ವಚನ ಚಳವಳಿ, ವಚನ ವ್ಯಾಸಂಗ ಮೊದಲಾದ 16ಕೃತಿಗಳು. ಸಂಪಾದಿತ-ಬಸವ ಪುರಾಣ ಸಂಗ್ರಹ, ಪದ್ಮಿನೀ ಪರಿಣಯ ಮೊದಲಾದ 5 ಕೃತಿಗಳು. ಅನುವಾದ-ಮದುವೆ ಮತ್ತು ನೀತಿ, ಹನ್ನೆರಡನೇ ರಾತ್ರಿ, ಅಶ್ವತ್ಥಾಮನ್, ಬುವಿಯ ಬಸಿರಿಗೆ ಪಯಣ, ಪಂಪ ರಾಮಾಯಣ  ಮುಂತಾದ 12 ಕೃತಿಗಳು. ಕಾದಂಬರಿಗಳು-ಸಾಮಾನ್ಯ, ...

READ MORE

Related Books