ಡಾ.ವಿಜಯಶ್ರೀ ಸಬರದ ಅವರ ವಿಮರ್ಶಾ ಲೇಖನಗಳ ಸಂಕಲನ ವಚನ ತೋರಣ. ಇದು ವಚನಸಾಹಿತ್ಯದ ವಿಮರ್ಶೆ- ಸಂಶೋಧನೆಗೆ ಸಂಬಂಧಿಸಿದಂತೆ ಅವರ 10ನೇ ಕೃತಿಯಾಗಿದೆ. 2001ರಲ್ಲಿ ಪ್ರಕಟವಾದ ನನ್ನ ವಚನ ವಾಹಿನಿ ವಿಮರ್ಶಾ ಕೃತಿ ಅನೇಕ ಪ್ರಶಸ್ತಿ-ಪುರಸ್ಕಾರಗಳನ್ನು ಪಡೆಯುವುದರ ಮೂಲಕ ನಾನು ಈ ಕ್ಷೇತ್ರದಲ್ಲಿ ಮುಂದುವರೆಯಲು ಕಾರಣವಾಯಿತು ಎಂದಿದ್ದಾರೆ ಲೇಖಕಿ ವಿಜಯಶ್ರೀ ಸಬರದ. ಈ ಕೃತಿಯಲ್ಲಿ ಪ್ರಕಾಶಕರ ನುಡಿ, ಪ್ರಧಾನ ಸಂಪಾದಕರ ನುಡಿ, ಲೇಖಕರ ನುಡಿಯೊಂದಿಗೆ ಕರ್ನಾಟಕದ ಮಹಿಳಾ ಅನುಭಾವಿಗಳು, ವಚನಕಾರ್ತಿಯರಲ್ಲಿ ನ್ಯಾಯ ಪರಿಕಲ್ಪನೆ, ಸಂಪ್ರದಾಯ: ಶರಣರ ಪ್ರತಿಕ್ರಿಯೆ, ಐದು ವಚನಗಳ ಪ್ರಾಯೋಗಿಕ ವಿಮರ್ಶೆ, ಆಧುನಿಕ ಕಾವ್ಯದಲ್ಲಿ ಅಕ್ಕಮಹಾದೇವಿ, ಮುಕ್ತಾಯಕ್ಕ ಹಾಗೂ ಅನುಭಾವ, ಆಯ್ದಕ್ಕಿ ಲಕ್ಕಮ್ಮ ಮತ್ತು ಕಾಯಕ ಪ್ರಜ್ಞೆ, ಜನಪದ ತ್ರಿಪದಿಗಳಲ್ಲಿ ಮುಕ್ತಾಯಕ್ಕ ಹಾಗೂ ಅಜಗಣ್ಣ, ಗಾಣಿಗ ಸಮುದಾಯದ ಶರಣ ಮಾರುಡಿಗೆ ನಾಚಯ್ಯ, ಚನ್ನಬಸವಣ್ಣ, ಮೋಳಿಗೆ ಮಾರಯ್ಯ, ನಿಜಗುಣರ ದೃಷ್ಟಿಯಲ್ಲಿ ಸ್ತ್ರೀ, ಅಕ್ಕಮಹಾದೇವಿ- ಸಂಪುಟ, ಹಾಗೂ ಶರಣ ಸಂಸ್ಕೃತಿ-ಪ್ರಸ್ತುತ ಸಂದರ್ಭ ಎಂಬ ಲೇಖನಗಳು ಸಂಕಲನಗೊಂಡಿವೆ.
©2024 Book Brahma Private Limited.