‘ಅಂತರಂಗದೊಳ್ ಚಿಗುರಲಿ ಶರಣರ ವಚನಾಮೃತಗಳು’ ಜಿ.ಎಸ್. ಗೋನಾಳ ಅವರ ಕೃತಿಯಾಗಿದೆ ಇದಕ್ಕೆ ಡಾ. ಜೆ ಎಸ್ ಪಾಟೀಲ ಅವರ ಬೆನ್ನುಡಿ ಬರಹವಿದೆ; ಶರಣಾನುಯಾಯಿ ಜಿ.ಎಸ್. ಗೋನಾಳ್ ಅವರ ‘ಅಂತರಂಗದೊಳ್ ಚಿಗುರಲಿ ಶರಣರ ವಚನಾಮೃತಗಳು’ ಕೃತಿಯು ಸಮಕಾಲೀನ ಸಮಸ್ಯೆಗಳಿಗೆ ಸಮಾಧಾನವನ್ನು ಸೂಚಿಸುವ ಶರಣರ ತತ್ವ ಚಿಂತನೆಗಳ ಸಂಗ್ರಹದಂತೆ ಹೊಳೆಯುತ್ತದೆ. ಇಂದಿನ ಆಧುನಿಕ, ಯಾಂತ್ರಿಕ ಬದಿಕಿನ ಜಂಡಗಳಲ್ಲಿ ಮನುಷ್ಯನ ಆದರ್ಶಗಳು ಮಾಯವಾಗುತ್ತಿವೆ. ಎಂದೆಂದಿಗೂ ಪ್ರಸ್ತುತವಾಗುವ ಶರಣರ ವಚನಗಳಲ್ಲಿ ಅಡಗಿರುವ ಚಿಂತನೆಗಳನ್ನು ಶ್ರೀಯುತರು ಸಾಂದರ್ಭಿಕವಾಗಿ ವಿವರಿಸಿದ್ದಾರೆ. ಇಲ್ಲಿ ಪ್ರಸ್ತಾಪವಾಗಿರುವ ಚಿಂತನೆಗಳನ್ನು ನಾವು ನಮ್ಮ ಬದುಕಿನಲ್ಲಿ ಲವಲೇಶವಾದರೂ ಅಳವಡಿಸಿಕೊಂಡರೆ ಬಹುಶಃ ನಮ್ಮನ್ನು ಕಾಡುತ್ತಿರುವ ಅನೇಕ ತೊಂದರೆಗಳಿಂದ ವಿಮುಕ್ತಿ ಹೊಂದಬಹುದು ಎನ್ನುವುದು ನನ್ನ ಖಚಿತ ಅಭಿಪ್ರಾಯವಾಗಿದೆ.
©2025 Book Brahma Private Limited.