ಹಿರಿಯ ಲೇಖಕಿ ವೀಣಾ ಬನ್ನಂಜೆ ಅವರ ಕೃತಿ-ಅಕ್ಕನ ದರ್ಶನ. 12ನೇ ಶತಮಾನದ ಶಿವಶರಣೆ ಅಕ್ಕ ಮಹಾದೇವಿಯ ವ್ಯಕ್ತಿತ್ವವವನ್ನು ವಚನಗಳ ಹಿನ್ನೆಲೆಯಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ. ಸಾಮಾನ್ಯ ಹೆಣ್ಣೊಬ್ಬಳ ಮನಸ್ಥಿತಿಯನ್ನು ಮೀರಿ ನಿಲ್ಲುವ ಅಕ್ಕ ಮಹಾದೇವಿಯ ಅಸಮಾನ್ಯತೆಯನ್ನು ಕಾಣಿಸುವತ್ತ ಲೇಖಕಿ ಒಳನೋಟ ಬೀರಿದ್ದು, ಆ ವ್ಯಕ್ತಿತ್ವ ಹತ್ತು ಹಲವು ಆಯಾಮಗಳಲ್ಲಿ ವಿಶ್ಲೇಷಿಸಿದ್ದಾರೆ. ಅಕ್ಕನ ವಿಚಾರ-ಭಾವ ಹಾಗೂ ವರ್ತನೆಗಳನ್ನು ಎಲೆ-ಎಳೆಯಾಗಿ ವಿಶ್ಲೇಷಿಸುವ ಲೇಖಕಿ, ತಮ್ಮ ವಿಶಿಷ್ಟ ನೋಟದಿಂದ ಅಕ್ಕನ ಮನಸ್ಥಿತಿಯನ್ನು, ಅವರು ಕಾಣುವ ಅನುಭಾವಿಕ ನೆಲೆಯನ್ನು ಚಿತ್ರಿಸಿದ್ದಾರೆ.
©2024 Book Brahma Private Limited.