ಪಂಡಿತ ಚನ್ನಪ್ಪ ಎರೇಸೀಮೆ ಅವರು ಬರೆದ ಕೃತಿ-ಅಜಗಣ್ಣ-ಮುಕ್ತಾಯಿಯಕ್ಕಗಳ ಪ್ರಸಂಗ. ಲಿಂಗದ ನೆಲೆಗೆ ಗುರುವಿನ ಅವಶ್ಯಕತೆ ಇದೆ. ಇದು ಮುಕ್ತಾಯಿಯಕ್ಕ ಅವರ ಪ್ರತಿಪಾದನೆಯೂ ಆಗಿದೆ. ಇದು ಪ್ರಭುದೇವರ ಪ್ರಶ್ನೆಗಳಿಗೆ ಉತ್ತರ ರೂಪದ ಸಿದ್ಧಾಂತವೂ ಆಗಿದೆ. ಅಜಗಣ್ಣ ಹಾಗೂ ಮುಕ್ತಾಯಿಯಕ್ಕ ಅವರ ಪರಿಕಲ್ಪನೆಯಲ್ಲಿ ಗುರು-ಲಿಂಗ-ಜಂಗಮ ಇಂತಹ ಪರಿಕಲ್ಪನೆಗಳ ಅಗಾಧತೆಯನ್ನು ವಿಶ್ನೇಷಣೆಗೆ ಒಳಪಡಿಸುವ ವಿದ್ವತ್ ಪೂರ್ಣ ಪ್ರಕ್ರಿಯೆ ಕೃತಿಯಲ್ಲಿ ಕಾಣಬಹುದು.
ವಿಶ್ಲೇಷಣೆ ವೇಳೆ ಅಲ್ಲಮಪ್ರಭು ಸೇರಿದಂತೆ ಇತರೆ ಶರಣರ ವಿಚಾರಗಳ ಪ್ರಸ್ತಾಪವಾಗುತ್ತದೆ. ಹೀಗಾಗಿ, ಎಲ್ಲ ಶಿವಶಿರಣರ ವೈಚಾರಿಕ ಹಂದರದಡಿ ಲೇಖಕರು ತಮ್ಮ ವಿಚಾರಗಳನ್ನು ಮಂಡಿಸುವ ಪರಿ ಓದುಗರನ್ನು ಚಿಂತನೆಗೆ ಪ್ರೇರೇಪಿಸುತ್ತದೆ.
ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹರವಿ ಗ್ರಾಮದ ಚೆನ್ನಪ್ಪ ಎರೇಸೀಮೆ ಅವರು (1919) ಜನಿಸಿದರು. ಮುಲ್ಕಿ ಪರೀಕ್ಷೆ ಪಾಸಾದ ನಂತರ ಶಿಕ್ಷಕರಾದರು. ಕೀರ್ತನಾಕಾರ-ಪ್ರವಚನಾಕಾರರಾದರು. ನುಡಿ ಗಾರುಡಿಗ ಎಂದೇ ಪ್ರಖ್ಯಾತರು. ಶಿಕ್ಷಕ ತರಬೇತಿ ಕಾಲೇಜಿನಲ್ಲಿ 30 ವರ್ಷ ಕಾಲ ಬೋಧನೆ ನಂತರ ನಿವೃತ್ತರಾದರು. ತುಮಕೂರಿನ ಸಿದ್ಧಗಂಗಾ ಮಠದೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಮಠದ ಸಿದ್ಧಗಂಗಾ ಮಾಸಪತ್ರಿಕೆಯ ಸಂಪಾದಕರೂ ಆಗಿದ್ದರು. ಶ್ರೀ ಶಿವಕುಮಾರ ಸ್ವಾಮೀಜಿಯವರ ಪಟ್ಟಾಧಿಕಾರ ಮಹೋತ್ಸವ ವೇಳೆ ‘ಸಿದ್ಧಗಂಗಾ ಶ್ರೀ’ ಹಾಗೂ ವಜ್ರಮಹೋತ್ಸವ ವೇಳೆ ‘ದಾಸೋಹ ಸಿರಿ’ ಮಹಾಸಂಪುಟಗಳ ರಚನೆ-ಪ್ರಕಟಣೆಯಲ್ಲೂ ಮಹತ್ವದ ಪಾತ್ರ ವಹಿಸಿದ್ದರು. ಪ್ರಾಥಮಿಕ, ಪ್ರೌಢಶಿಕ್ಷಣ, ಪಿಯುಸಿ ...
READ MORE