ವಚನ ಸಾಹಿತ್ಯದ ಕುರಿತು ವಿವಿಧ ಲೇಖಕರು ಬರೆದ ಲೇಖನಗಳ ಸಂಕಲನ ‘ವಚನ ಸಂಪದ’. ಸಿ.ಕೆ. ನಾವಲಗಿ ಸಂಪಾದಕರು. ರಾಜೇಶ್ವರಿ ಮಹೇಶ್ವರಯ್ಯ ಅವರ ಶಿವಶರಣೆಯರು ಪ್ರತಿಪಾದಿಸಿದ ಮೌಲ್ಯಗಳ ಪ್ರಸ್ತುತತೆ, ಗುರುಪಾದ ಮರಿಗುದ್ದಿ ಅವರ ಬಸವಯುಗದ ವಚನಕಾರರು, ವ್ಹಿ.ಎಸ್. ಮಾಳಿ ಅವರ ವಚನ ಸಂಸ್ಕೃತಿ: ಬೆಡಗಿನ ವಚನಗಳು, ಅಶೋಕ ನರೋಡೆ ಅವರ ಶಿವಶರಣೆಯ ಕಾಯಕ: ಸಂಗ್ರಹ ನಿಷೇಧ, ವೈ.ಎಂ ಯಾಕೊಳ್ಳಿ ಅವರ ವಚನ ಸಾಹಿತ್ಯದಲ್ಲಿ ಕೃಷಿ ಲೇಖನಗಳಿವೆ. ಹಾಗೆಯೇ, ಸಿ.ಕೆ. ನಾವಲಗಿ ಅವ ಶರಣರ-ದಾಸರ ಆತ್ಮಚಿಂತನೆಯ ಪ್ರಸ್ತುತತೆ, ಎಸ್.ಎಂ. ಗಂಗಾಧರಯ್ಯ ಅವರ ಅಲ್ಲಮ ಕೂಗಿದ ಕೂಗು, ಬಸವರಾಜ ಜಗಜಂಪಿ ಅವರ ಆಧುನಿಕ ವಚನಕಾರ ಸಿದ್ಧಯ್ಯ ಪುರಾಣಿಕ, ಕೆ.ಎನ್. ದೊಡಮನಿ ಅವರ ವಚನ ಸಾಹಿತ್ಯದಲ್ಲಿ ವೈಚಾರಿಕಪ್ರಜ್ಞೆ, ಜಿ.ಕೆ. ಹಿರೇಮಠ ಅವರ ಶಿವಶರಣೆಯ ಒಲವು-ನಿಲುವು, ಗುರುದೇವಿ ಹುಲೆಪ್ಪನವರಮಠ ಅವರ ಶರಣರ ದೃಷ್ಟಿಯಲ್ಲಿ ಪೂಜೆ, ಹಾಗೂ ಈಶ್ವರಚಂದ್ರ ಬೆಟಗೇರಿ ಅವರ ಶಿವಶರಣರ ವಚನಗಳಲ್ಲಿ ಮನೋವಿಜ್ಞಾನ ಈ ರೀತಿಯ ಲೇಖನಗಳಿವೆ.
©2024 Book Brahma Private Limited.