‘ಬಸವ ಜ್ಞಾನ’ ಕೃತಿಯು ಮೃತ್ಯುಂಜಯ ರುಮಾಲೆ ಅವರ ಸಂಪಾದಿತ ಗ್ರಂಥವಾಗಿದೆ. ಈ ಕೃತಿಯ ಬೆನ್ನುಡಿಯಲ್ಲಿರುವ ಬರಹವೂ ಹೀಗಿದೆ; ಮೃತ್ಯುಂಜಯ ರುಮಾಲೆ ಅವರು ಶರಣ ಜೀವಿಗಳು. ಗುರುಲಿಂಗ ಜಂಗಮ ಪ್ರೇಮಿಗಳು, ಸದಾಕಾಲ ಹೊಸತೊಂದನ್ನು ಹುಡುಕುವ ಸತ್ಯಾನ್ವೇಷಕರು. ನೂರಾರು ಮೌಲಿಕ ವಿಷಯಗಳ ಕುರಿತು ಮಾತನಾಡಿದ್ದಾರೆ. ಹೊರ ರಾಜ್ಯಗಳಲ್ಲಿಯೂ ಕನ್ನಡದ ಕಂಪನ್ನು ಬೀರಿದ್ದಾರೆ. ವಿಚಾರ ಸಂಕಿರಣಗಳಲ್ಲಿ ಹತ್ತಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಕ್ರಿಯಾಶೀಲ ಬರಹಗಾರರಾದ ಶ್ರೀಯುತರು ನಮ್ಮ ಆಶ್ರಮದ ಅಭಿಮಾನಿಗಳು. ಅಲ್ಲದೆ, ನಮ್ಮ ಪ್ರಾರಂಭದ ಪ್ರವಚನಗಳಿಗೆ ಶಕ್ತಿಯಾಗಿ ನಿಂತವರು. ಇಂದು ‘ಬಸವಜ್ಞಾನ ಗುರುಕುಲ’ದ ‘ದಶಮಾನೋತ್ಸವ ಸಂಭ್ರಮ’ ದಲ್ಲಿ ಬಿಡುಗಡೆಗೊಂಡಿರುವ ‘ಬಸವಜ್ಞಾನ’ ಗ್ರಂಥದ ಸಂಪಾದಕರಾಗಿದ್ದಾರೆ. ನಾಡಿನ ಹತ್ತು ಶ್ರೇಷ್ಠ ವಿದ್ವಾಂಸರಿಂದ ಅಮೂಲ್ಯ ಲೇಖನಗಳನ್ನು ಸಂಗ್ರಹಿಸಿ ಈ ಗುರುತರ ಕಾರ್ಯವನ್ನು ಪೂರ್ಣಗೊಳಿಸಿದ್ದಾರೆ’ ಎಂದು ಪ್ರಶಂಸಿಸಲಾಗಿದೆ..
©2025 Book Brahma Private Limited.