ಲೇಖಕ ಚನ್ನಬಸವಯ್ಯ ಹಿರೇಮಠ ಅವರು ವಚನಗಳ ವಿಮರ್ಶಾ ಕೃತಿ-‘ದಿಟವ ನುಡಿವುದು’. ಒಟ್ಟು 30 ಲೇಖನಗಳಿದ್ದು ಕಲ್ಯಾಣ ಶರಣರ ದಿಟ್ಟ ಹೊರಾಟ, ವೈಚಾರಿಕ ಮೋನಚು ಹಾಗೂ ಧಾರ್ಮಿಕ ಆಚಾರ ವಿಚಾರಗಳನ್ನು ಚರ್ಚಿಸಲಾಗಿದೆ. ವಚನಗಳಲ್ಲಿಯ ವಿಚಾರ, ಅವುಗಳ ಸಾಮಾಜಿಕ ಉದ್ದೇಶ, ಬದುಕಿಗೆ ಬೆಳಕಾಗುವ ರೀತಿ, ವ್ಯಕ್ತಿತ್ವ ಬೆಳಗಿಸಿಕೊಳ್ಳುವ ಬಗೆ ಇತ್ಯಾದಿ ಅಂಶಗಳಲ್ಲಿ ವಿಷಯವು ಕೇಂದ್ರೀಕೃತಗೊಂಡಿದೆ.
ಲೇಖಕ ಡಾ. ಚನ್ನಬಸವಯ್ಯ ಹಿರೇಮಠ ಅವರು ಮೂಲತಃ ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದವರು. ತಂದೆ- ವೀರಭದ್ರಯ್ಯ ಹಿರೇಮಠ, ತಾಯಿ- ಗೌರಮ್ಮ. ಚನ್ನಬಸವಯ್ಯ ಎಂ.ಎ. ಹಾಗೂ ಪಿಎಚ್ ಡಿ ಪದವೀಧರರು. ಸ್ನಾತಕೋತ್ತರ ಡಿಪ್ಲೋಮಾ ಇನ್ ಬಸವೇಶ್ವರ ಸ್ಟಡೀಜ್ (ಪ್ರಥಮಸ್ಥಾನ ಚಿನ್ನದ ಪದಕದೊಂದಿಗೆ) ಸದ್ಯ, ರಾಯಚೂರಿನಲ್ಲಿ ವಾಸವಿದ್ದು, ಅಲ್ಲಿಯ ಬಿ.ಆರ್.ಬಿ. ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕೃತಿಗಳು : (ಸಂಶೋಧನೆ) ಕುರುಗೋಡು ಸಿಂದರು ಒಂದು ಅಧ್ಯಯನ, ನಮ್ಮ ಜಿಲ್ಲೆ ಐತಿಹಾಸಿಕ ಪರಿಚಯ, ಎಡೆದೊರೆನಾಡು , ರಾಯಚೂರು ಜಿಲ್ಲೆಯ ಶರಣರು, ಮಸ್ಕಿಯ ಶಾಸನಗಳು, ಸತ್ಯದಹಾದಿ ಸಂಪುಟ-1 , ಅಟ್ಟಳೆನಾಡಿನ ಸಿಂದರು , ಪ್ರಾಚೀನ ಕರ್ನಾಟಕದ ರಾಜಕೀಯ ವಿಭಾಗಗಳು, ಅನಾವರಣ(ಸಂಶೋಧನ ಲೇಖನಗಳು), ಕಲ್ಯಾಣ ಕರ್ನಾಟಕದ ಸಂಸ್ಕೃತಿ, (ಸಂಪಾದಿತ ಕೃತಿಗಳು) ರಾಯಚೂರು-ಕೊಪ್ಪಳ ಜಿಲ್ಲೆಯ ಶಾಸನಗಳು , ಮಾನ್ವಿ ...
READ MORE