ಲೇಖಕ ಶೇಖರಯ್ಯ ಟಿ.ಎಚ್.ಎಂ. ಅವರ ಕೃತಿ-ವಚನಸಿರಿ (ಆಧುನಿಕ ವಚನಗಳು). ನಿರೂಪಣೆಯಲ್ಲಿ ವಚನಗಳ ಶೈಲಿ ಹೊಂದಿದ್ದರೂ ವಿಷಯ ವಸ್ತುಗಳು ಆಧುನಿಕ ಸಮಸ್ಯೆ-ಪರಿಹಾರಗಳ ಮೇಲೆ ಬೆಳಕು ಚೆಲ್ಲುತ್ತದೆ. ಇಂದಿನ ಅಗತ್ಯ, ಅಳವಡಿಸಿಕೊಳ್ಳಬೇಕಾದ ಸಂಸ್ಕಾರಗಳು, ನೀತಿ ನಿರೂಪಣೆ ಇತ್ಯಾದಿಗಳನ್ನು ವಸ್ತುವಾಗಿಸಿಕೊಂಡ ವಚನಗಳು ಓದುಗರ ಗಮನ ಸೆಳೆಯುತ್ತವೆ. ಖ್ಯಾತ ಸಾಹಿತಿ ಡಾ. ಅಮರೇಶ ನುಗಡೋಣಿ ಅವರು ಈ ಕೃತಿಗೆ ಮುನ್ನುಡಿ ಬರೆದು ‘ಶೇಖರಯ್ಯಅವರ ವಚನಗಳಲ್ಲಿ, ಓದಿಸಿಕೊಳ್ಳುವ ಗುಣ, ನೆನಪಿನಲ್ಲಿ ಉಳಿಯುವ ಲಯವಿದೆ, ಮಾಗಿದ, ಪಕ್ವಗೊಂಡ ವಿಚಾರಗಳನ್ನು ಕಾವ್ಯರೂಪದಲ್ಲಿ ಹೆಣೆಯುವ ರೀತಿ ಈ ಕವಿಗೆ ಸಿದ್ಧಿಸಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಶೇಖರಯ್ಯ ಟಿ. ಎಚ್. ಎಂ ಅವರು ಗೆದ್ದಲಗೆಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು. ಎಂ. ಎ, ಬಿ. ಎಡ್ ಪದವೀಧರರು. ಸಾಹಿತ್ಯ ಕೃಷಿ ಇವರ ಹವ್ಯಾಸ. ಕೃತಿಗಳು: ವಚನಸಿರಿ ( ಆಧುನಿಕ ವಚನಗಳು) ಪ್ರಶಸ್ತಿ-ಪುರಸ್ಕಾರ: ಚಳ್ಳಕೆರೆಯ ರೋಟರಿಕ್ಲಬ್ ನಿಂದ ಕನ್ನಡಸಿರಿ ಪ್ರಶಸ್ತಿ, ಉತ್ತಮ ಶಿಕ್ಷಕ ಪ್ರಶಸ್ತಿ ಹಲವು ಆಶುಭಾಷಣ ಗಳಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿ ದೊರೆತಿವೆ. ...
READ MORE